ಕೊಡಗು : ಕೊಡಗು ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಮೊದಲ ಬಲಿಯಾಗಿದ್ದು ಜಿಲ್ಲೆಯ ಜನತೆಯಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ರೂ ಕೂಡಾ ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಬಲಿ ಸಂಭವಿಸಿರಲಿಲ್ಲ. ಆದರೆ ಇದೀಗ ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಮೊದಲ ಬಲಿಯಾಗಿದ್ದು ಕೊಡಗಿನ ಜನತೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.ಕುಶಾಲನಗರದ ದಂಡಿನ ಪೇಟೆ ನಿವಾಸಿಯಾದ 58 ವರ್ಷದ ವ್ಯಕ್ತಿಗೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಶನಿವಾರದಂದು ಸಂಜೆ 4 ಗಂಟೆಗೆ ಕುಶಾಲನಗರದ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ವ್ಯಕ್ತಿಯನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಆ ವ್ಯಕ್ತಿಗೆ ತೀವ್ರ ಉಸಿರಾಟದ ತೊಂದರೆ ಇದ್ದ ಕಾರಣ ತುರ್ತಾಗಿ ಚಿಕಿತ್ಸೆ ಪ್ರಾರಂಬಿಸಿದ್ರು ಕೂಡ ಅದೇ ದಿನ 4:30 ರ ವೇಳೆಗೆ ಆತ ಮೃತ ಪಡುತ್ತಾನೆ. ಇನ್ನು ಆತ ಕಳೆದ 10 ವರ್ಷಗಳಿಂದ ಸಕ್ಕರೆ ಖಾಯಿಲೆ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನು ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ಆತನ ಮೂಗು ಹಾಗೂ ಗಂಟಲು ದ್ರವವನ್ನ ಪರಿಕ್ಷೇಗೆ ಒಳಪಡಿಸಿದ ಸಂದರ್ಭದಲ್ಲಿ ಅತನಿಗೆ ಸೋಂಕು ತಗಲಿರೋದು ದೃಢವಾಗುತ್ತದೆ. ಮೃತನ ಅಂತ್ಯ ಸಂಸ್ಕಾರವನ್ನು ಮಡಿಕೇರಿಯ ಹೊರವಲಯದಲ್ಲಿ ನೆರವೇರಿಸಲಾಗಿದೆ. ಕರೋನ ಪಾಸಿಟಿವ್ ಬರುವುದಕ್ಕೂ ಮೊದಲು ಸತ್ತವ್ಯಕ್ತಿ ಅಂತ್ಯ ಸಂಸ್ಕಾರವನ್ನು ಪಿಪಿ ಕೀಟ್ ಗಳನ್ನು ಬಳಸಿ ಪಾಪ್ಯುಲರ್ ಫೇಂಟ್ ಆಫ್ ಇಂಡಿಯಾದ ಕೆಲವು ಯುವಕರ ತಂಡ ಧಾರ್ಮಿಕ ವಿಧಿ ವಿಧಾನಗಳಂತೆ ಶವಸಂಸ್ಕಾರ ಮಾಡಲಾಗಿದೆ. ಇದೀಗ ದಂಡಿನಪೇಟೆ ಪ್ರದೇಶವನ್ನ ನಿಯಂತ್ರಿತ ಪ್ರದೇಶವೆಂದು ಘೋಸಿಸಲಾಗಿದೆ. ಜಿಲ್ಲೆಯಲ್ಲಿ ಮೊದಲ ಬಲಿ ಆಗಿರೋದು ಕೊಡಗಿನ ಜನತೆಯಲ್ಲಿ ಮತ್ತಷ್ಟು ಆತಂಕ ಮನೆ ಮಾಡುವಂತೆ ಮಾಡಿದೆ.