Tuesday, January 14, 2025

ದೇವನಹಳ್ಳಿ ತಾಲ್ಲೂಕು ಕಛೇರಿ ಸೀಲ್ ಡೌನ್..!

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಕಛೇರಿ ಒಂದು ದಿನದ ಮಟ್ಟಿಗೆ ಸೀಲ್ ಡೌನ್ ಮಾಡಲಾಗಿದೆ.‌ ತಾಲ್ಲೂಕು ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ADLR ಅಧಿಕಾರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ತಾಲ್ಲೂಕು ಕಛೇರಿ ಸೀಲ್ ಡೌನ್ ಮಾಡಲಾಗಿದೆ. ಜೊತೆಗೆ ಕಛೇರಿ ಗೆ ಸ್ಯಾನಿಟೈಸ್ ಮಾಡಿ ಶುಚಿಗೊಳಿಸಲಾಗಿದೆ. ಕಳೆದ ವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಗೆ ಕೊರೊನಾ ಪಾಸಿಟಿವ್ ಬಂದು ಜಿಲ್ಲಾಧಿಕಾರಿ ಕಛೇರಿಯನ್ನು 48 ಗಂಟೆಗಳ ಕಾಲ ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಎಡಿಎಲ್ಆರ್ ಗೆ ಕೊರೊನಾ ಪಾಸಿಟಿವ್ ಹಿನ್ನೆಲೆ ದೇವನಹಳ್ಳಿ ತಾಲ್ಲೂಕು ಕಛೇರಿ ಸೀಲ್ ಡೌನ್ ಆಗಿದೆ. ದಿನನಿತ್ಯ ಸಾವಿರಾರು ಜನರು ಆಗಮಿಸುವ ಕಛೇರಿ ಸೀಲ್ ಡೌನ್ ಆಗಿದೆ. ಅಧಿಕಾರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಅಧಿಕಾರಿಯ ಪ್ರಾಥಮಿಕ ಸಂಪರ್ಕ ಇದ್ದಂತಹ ಸಿಬ್ಬಂದಿಯ ಸ್ವಾಬ್ ಟೆಸ್ಟ್ ಮಾಡಿಸಲಾಗುತ್ತಿದೆ ಜೊತೆಗೆ ಕ್ವಾರಂಟೈನ್ ಗೆ ಸೂಚಿಸಲಾಗಿದೆ.

RELATED ARTICLES

Related Articles

TRENDING ARTICLES