ಬೆಂಗಳೂರು : ಮೊದ ಮೊದಲು ಕೊರೋನಾ ಮಹಾ ಮಾರಿ ಕೆಮ್ಮು, ಶೀತ, ಮತ್ತಿತ್ತರ ರೋಗ ಲಕ್ಷಣಗಳು ಇರೋರಿಗೆ ಮಾತ್ರ ಬರುತ್ತಿತ್ತು. ಆದ್ರೆ ಇತ್ತೀಚೆಗೆ ಯಾವ ರೋಗ ಲಕ್ಷಣವೂ ಇಲ್ಲದೆ ಇರೋರಿಗೂ ಕೂಡ ಕೊರೋನಾ ಪ್ರತ್ಯಕ್ಷವಾಗುತ್ತಿದೆ. ಬೆಂಗಳೂರಿನಲ್ಲಿ ನಿನ್ನೆ ಡೆಡ್ಲಿ ಕೊರೋನಾಗೆ 16 ಮಂದಿ ಬಲಿಯಾಗಿದ್ದಾರೆ. ಬಲಿಯಾದ 16 ಮಂದಿಯಲ್ಲಿ 6 ಜನರಿಗೆ ರೋಗಲಕ್ಷಣ ಇರಲಿಲ್ಲ. ಸದ್ಯ ನಗರದಲ್ಲಿ ಕೊರೋನಾ ಲಕ್ಷಣಗಳಿಲ್ಲದ ಸೋಂಕಿತರು ಸಾವನ್ನಪ್ಪುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.