ಬಳ್ಳಾರಿ : ಮಹಿಳೆಯೋರ್ವರು ಮಲಗಿದ್ದ ಸಂದರ್ಭದಲ್ಲಿ ಹಾವೊಂದು ಹಾಸಿಗೆಯಲ್ಲೇ ಸೇರಿಕೊಂಡಿದೆ. ಮಲಗಿದ್ದ ಮಹಿಳೆಗೆ ಹಾವು ಕಚ್ಚಿ ರೈತ ಮಹಿಳೆ ಮೃತಪಟ್ಡಿದ್ದಾರೆ.
ಬಳ್ಳಾರಿ ತಾಲೂಕಿನ ಸಂಜೀವರಾಯನ ಕೋಟೆ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ. 41 ವರ್ಷದ ರೈತ ಮಹಿಳೆ ತಿಮ್ಮಕ್ಕ ಮೃತ ದುರ್ದೈವಿ. ಮನೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳುವ ಸಂದರ್ಭ ಹಾವು ಹಾಸಿಗೆ ಸೇರಿಕೊಂಡಿದೆ. ಆದ್ರೆ ನಿದ್ರೆಯಲ್ಲಿದ್ದ ಪರಿಣಾಮ ಹಾವು ಸೇರಿಕೊಂಡಿದ್ದು ಮತ್ತು ಕಚ್ಚಿದ್ದು ಮಹಿಳಿಗೆ ಅರಿವಿಗೆ ಬಂದಿಲ್ಲ. ಎಚ್ಚರಗೊಂಡ ಮೇಲೆ ಮಹಿಳೆಗೆ ತಲೆಸುತ್ತು ಪ್ರಾರಂಬವಾಗಿದೆ. ಹಾಸಿಗೆಯಿಂದ ಎದ್ದು ನೋಡಿದರೆ ಹಾವು ಹೊರಬಂದಿರುವುದು ಕಾಣಿಸಿಕೊಂಡಿದೆ.
ಸಂಡೇ ಲಾಕ್ ಡೌನ್ ಇದ್ದ ಕಾರಣ ದುರ್ದೈವಕ್ಕೆ ಯಾವ ವಾಹನವೂ ಚಿಕಿತ್ಸೆಗೆ ಕರೆದೊಯ್ಯಲು ಸಿಕ್ಕಿಲ್ಲ. ವಾಹನ ಸಿಗದ ಕಾರಣ ಮಹಿಳೆಗೆ ನಾಟಿ ಔಷಧ ಮಾಡಿಸಲಾಗಿತ್ತು. ಆದ್ರೆ ವಿಷ ದೇಹ ಆವರಿಸಿಕೊಂಡಿದ್ದರಿಂದ ನಾಟಿ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ತಿಮ್ಮಕ್ಕ ಮೃತಪಟ್ಡಿದ್ದಾರೆ.
ಅರುಣ್ ನವಲಿ ಪವರ್ ಟಿವಿ ಬಳ್ಳಾರಿ