Monday, January 13, 2025

ಕೊರೊನಾ ವಾರಿಯರ್ಸ್ ಗೆ ಬೆಂಬಿಡದ ಕೊರೊನಾ..!

ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಅಟ್ಟಹಾಸ ನಿಲ್ತಾನೇ ಇಲ್ಲ. ನಿನ್ನೆ 139 ಜನರಿಗೆ ಪಾಸಿಟಿವ್ ಬಂದಿದ್ದು. ಒಂದು ಬಲಿ ಪಡೆದಿದೆ. ಇದರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಹೊಂದಿದ್ದ 35 ಜನರು ಮೃತಪಟ್ಟಂತಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ನ ಸಹ ಕೊರೊನಾ ಬೆಂಬಿಡದೆ ಕಾಡ್ತಿದೆ.

ವೈದ್ಯರು, ಆಶಾ ಕಾರ್ಯಕರ್ತೆಯರು, ಪೊಲೀಸರನ್ನು ಸಹ ಮಹಾಮಾರಿ ಕಾಡ್ತಿದೆ. ಇಲ್ಲಿಯವರೆಗೆ 50 ಕ್ಕೂ ಅಧಿಕ ಕೊರೊನಾ ವಾರಿಯರ್ಸ್​ ಗೆ ಕೊರೊನಾ ದೃಢಪಟ್ಟಿದೆ. ಕಳೆದ ಎರಡು ದಿನಗಳ ಅಂತರದಲ್ಲೇ 25 ಜನ ಕೊರೊನಾ ವಾರಿಯರ್ಸ್ ಗಳಿಗೆ ಸೋಂಕು ದೃಢಪಟ್ಟಿದೆ. ವಿಮ್ಸ್ ನ ವೈದ್ಯರು, ದಾದಿಯರು, ವಿದ್ಯಾರ್ಥಿಗಳು, ಮತ್ತು ಪೊಲೀಸರಿಗೂ ಸಹ ಕೊರೊನಾ ದೃಢಪಟ್ಟಿದೆ.

ಸೋಂಕಿತರ ಪ್ರಥಮ ಸಂಪರ್ಕಿತರ ಪೈಕಿ 30 ಕ್ಕೂ ಹೆಚ್ಚು ಜನರನ್ನು ಕ್ವಾರೆಂಟೈನ್ ಮಾಡಲಾಗಿದ್ದು. ಕಂಪ್ಲಿ ಪೊಲೀಸ್ ಠಾಣೆ ಕಂಪ್ಲೀಟ್ ಸೀಲ್ ಡೌನ್ ಅಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಳ್ಳಾರಿ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್, ಎಲ್ಲರೂ ಸ್ಟೇಬಲ್ ಆಗಿದ್ದಾರೆ ಸೋಂಕಿತರ ಚಿಕಿತ್ಸೆ ನಡೀತಿದೆ ವಾರಿಯರ್ಸ್ ಆದಷ್ಟು ಬೇಗ ಗುಣಮುಖರಾಗಲಿದ್ದಾರೆ ಎಂದು ತಿಳಿಸಿದರು..

ಅರುಣ್ ನವಲಿ ಪವರ್ ಟಿವಿ ಬಳ್ಳಾರಿ

RELATED ARTICLES

Related Articles

TRENDING ARTICLES