ಬಾಗಲಕೋಟೆ: ದಿನ ದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ಜಿಲ್ಲೆಯಲ್ಲಿ ಮದುವೆಗಳಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ರಾಜೆಂದ್ರ ಅವರು ಆದೇಶ ಹೊರಡಿಸಿದ್ರು.ಜಿಲ್ಲೆಯಲ್ಲಿ ನಡೆಯುತಿರುವ ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನ ಭಾಗವಹಿಸುತ್ತಿದ್ದು, ಇದರ ಪರಿಣಾಮ ಕಾರ್ಯಕ್ರಮದಲ್ಲಿ ಭಾಗವಹಿಸಿದರಿಗೂ ಕೊರೊನಾ ಸೋಂಕು ಹರಡುತ್ತಿರುವುದನ್ನು ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಮದುವೆ ಸಮಾರಂಭಕ್ಕೆ ಅನುಮತಿ ನೀಡಬಾರದೆಂಬ ಸೂಚನೆ ಮೇರೆಗೆ ಮದುವೆಗಳ ನಿಷೇಧಕ್ಕೆ ಜಿಲ್ಲಾಡಳಿತ ಆದೇಶಿಸಿದೆ.ಜಿಲ್ಲೆಯಲ್ಲಿ ಕಲಾದಗಿ ಮತ್ತು ಇಲಕಲ್ ನಲ್ಲಿ ನಡೆದ ಎರಡು ಮದುವೆಗಳಿಂದ 60ಕ್ಕೂ ಹೆಚ್ಚು ಪ್ರಕರಣಗಳು ದೃಡಪಟ್ಟಿವೆ. ಇನ್ನು ಬಾದಾಮಿ ಸೀಮಂತರ ಕಾರ್ಯಕ್ರಮದಿಂದ 15, ಶವ ಸಂಸ್ಕಾರದಿಂದ 20 ಕ್ಕೂ ಹೆಚ್ಚು ಪ್ರಕರಣಗಳು ದೃಡ ಪಟ್ಟಿವೆ.ಮದುವೆ ಮಾಡಿಕೊಳ್ಳುವವರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸೀಮಿತ ಸಂಖ್ಯೆಯಲ್ಲಿ ಆಗಮಿಸಿ ಮದುವೆ ಮಾಡಿಕೊಳ್ಳ ಬಹುದಾಗಿದೆ ಎಂದು ತಿಳಿಸಿದರು ಜಿಲ್ಲಾಧಿಕಾರಿ ತಿಳಿಸಿದ್ರು..