Monday, January 13, 2025

ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಕೊರೋನಾ ಪಾಸಿಟಿವ್ ರೋಗಿಗಳು..!

ಉಡುಪಿ ಜಿಲ್ಲೆಯಲ್ಲಿ ದಿನ ನಿತ್ಯ ಎರಡಂಕಿಯಲ್ಲಿ ಪ್ರಕರಣಗಳು ಪತ್ತೆಯಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಆದರೆ ಅಷ್ಟೇ ವೇಗವಾಗಿ ಕೊರೋನಾ ಪಾಸಿಟಿವ್ ವ್ಯಕ್ತಿಗಳು ಗುಣ ಮೂಖರಾಗಿ ಮನೆಗೆ ತೆರಳುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು. ಸದ್ಯ ಜಿಲ್ಲೆಯಲ್ಲಿ ಕೇವಲ 160 ಆಕ್ಟಿವ್ ಪ್ರಕರಣಗಳು ಮಾತ್ರ ಕೊವೀಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿ 17,545 ಶಂಕಿತ ಕೊರೋನಾ ರೋಗಿಗಳ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 14,556 ವರದಿಗಳು ನೆಗೆಟಿವ್ ಬಂದಿತ್ತು. ಉಳಿದಂತೆ 1277 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು, ಅದರಲ್ಲಿ 1114 ಮಂದಿ ಈಗಾಗಲೇ ಕೊರೋನಾ ಮುಕ್ತರಾಗಿದ್ದಾರೆ.

RELATED ARTICLES

Related Articles

TRENDING ARTICLES