ಬಳ್ಳಾರಿ : ರಾಜ್ಯಾದ್ಯಾಂತ ಸಂಡೇ ಲಾಕ್ ಡೌನ್ ಜಾರಿಯಲ್ಲಿದೆ. ಬಳ್ಳಾರಿಯಲ್ಲೂ ಲಾಕ್ ಡೌನ್ ಜಾರಿಗೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಈ ಸಂಬಂಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ವಿಶೇಷವಾಗಿ ಲಾಕ್ ಡೌನ್ ಪರಿಶೀಲನೆಗೆ ಖುದ್ದು ಬಳ್ಳಾರಿ SP ಸೈಕಲ್ ರೌಂಡ್ ಹೊಡೆದಿದ್ದಾರೆ.
ಅಂತರ್ ಜಿಲ್ಲಾ ಗಡಿಯಲ್ಲಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲನೆ ಆಗ್ತಿಲ್ಲ ಎಂಬ ಆರೋಪ ಇದೆ. ಅಂತರ್ ಜಿಲ್ಲೆಯಲ್ಲಿ ವಾಹನ ಸಂಚಾರ ಮತ್ತು ಜನ ಸಂಚಾರ ಎಗ್ಗಿಲ್ಲದೇ ನಡೀತಿದೆ ಅನ್ನೋ ಆರೋಪ ಸಹ ಇತ್ತು. ಹೀಗಾಗಿ ಸೈಕಲ್ ನಲ್ಲಿ ಇಂದು SP ಖುದ್ದಾಗಿ ಪರಿಶೀಲಿಸಲು ತೆರಳಿದ್ದಾರೆ.
ಸೇವಾಸಿಂಧುವಿನಿಂದ ಅನುಮತಿ ಪಡೆದವರಿಗೆ ಮಾತ್ರ ಜಿಲ್ಲಾ ಪ್ರವೇಶಕ್ಕೆ ಅನುಮತಿ ಇದೆ. ಅದ್ರೆ ಇದನ್ನು ಮೀರಿ ಗಡಿ ಭಾಗಗಳಲ್ಲಿ ಜನಸಂಚಾರ ಇದೆ ಎನ್ನುವ ಆರೋಪ ಕೇಳಿಬಂದಿತ್ತು. ಹೀಗಾಗಿ ಬಳ್ಳಾರಿಯ ಮೋಕಾ ಮತ್ತು ಜೋಳದ ರಾಶಿ ಚೆಕ್ ಪೋಸ್ಟ್ ಗೆ ಸರ್ಪ್ರೈಸ್ ವಿಸಿಟ್ ಮಾಡಿದ್ದಾರೆ.
ಸೈಕಲ್ ಏರಿ ಗಡಿಬಾಗದ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪೊಲೀಸ್ ಪಹರೆಯನ್ನು ಪರಿಶೀಲಿಸಿದರು. ಜಿಲ್ಲೆಯಾದ್ಯಾಂತ ನಿನ್ನೆ ರಾತ್ರಿಯಿಂದ ಲಾಕ್ ಡೌನ್ ಇದ್ದು ಸುಮಾರು 2500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಎಲ್ಲ ಕಡೆಯೂ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದು, ಜನರ ಅನಗತ್ಯ ಓಡಾಟ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಎಸ್ ಪಿ ತಿಳಿಸಿದರು..
ಅರುಣ್ ನವಲಿ, ಪವರ್ ಟಿವಿ, ಬಳ್ಳಾರಿ