ವಿಜಯಪುರ : ಕೊರೋನಾ ಅಬ್ಬರದಿಂದ ವಿಜಯಪುರ ಜಿಲ್ಲೆಯಲ್ಲಿ ಮತ್ತೆರಡು ಪೋಲಿಸ್ ಠಾಣೆ ಸೀಲ್ ಡೌನ್ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಹಾಗೂ ಕೂಡಗಿ ಪೋಲಿಸ್ ಠಾಣೆ ಸೀಲ್ ಡೌನ್ ಮಾಡಲಾಗಿದ್ದು, ಈ ಠಾಣೆಯಲ್ಲಿ ಕೋವಿಡ್ ಕರ್ತವ್ಯ ನಿರ್ವಹಿಸಿದ ಇಬ್ಬರು ಪೇದೆಗಳಿಗೆ ಪಾಸಿಟಿವ್ ದೃಢವಾಗಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಠಾಣೆಯ ಓರ್ವ ಪೇದೆ ಹಾಗೂ ಕೂಡಗಿ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಓರ್ವ ಪೇದೆಗೆ ಪಾಸಿಟಿವ್ ದೃಢವಾಗಿದ್ದರಿಂದ ಬಸವನ ಬಾಗೇವಾಡಿ ಠಾಣೆಯನ್ನೂ ಪೋಲಿಸ್ ಉಪಾದ್ಯಕ್ಷರ ಖಾಲಿ ಇರುವ ಪೋಲಿಸ್ ವಸತಿ ಗ್ರಹಕ್ಕೆ ಸ್ಥಳಾಂತರಿಸಲಾಗಿದ್ದರೆ ಕೂಡಗಿ ಠಾಣೆಯನ್ನು ನಿಡಗುಂದಿ ಪೋಲಿಸ್ ಠಾಣಾ ಆವರಣಕ್ಕೆ ಶಿಪ್ಟ್ ಮಾಡಲಾಗಿದೆ ಎಂದು ಪೋಲಿಸ್ ವರಿಷ್ಠ ಅಧಿಕಾರಿ ಅನುಪಮ ಅಗ್ರವಾಲ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.