ಹಾಸನ- ಹಾಸನ ಜಿಲ್ಲೆಯಲ್ಲಿ ಡೆಡ್ಲಿ ವೈರಸ್ ಕೊರೊನಾಗೆ ಮತ್ತೊಂದು ಬಲಿಯಾಗಿದ್ದು, ಬೇಲೂರು ತಾಲ್ಲೂಕು ಮೂಲದ ವ್ಯಕ್ತಿ ಇಂದು ಕೊರೊನಾಗೆ ಸಾವನ್ನಪ್ಪಿದ್ದಾರೆ. ಈ ಮೂಲಕ ಹಾಸನ ಜಿಲ್ಲೆಯಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. ಮನೆಯಲ್ಲೇ ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ನಿನ್ನೆ ಮಧ್ಯಾಹ್ನ 38 ವರ್ಷದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು, ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಸ್ವ್ಯಾಬ್ ಪಡೆದು ಪರೀಕ್ಷೆ ನಡೆಸಿತ್ತು. ವರದಿಯಲ್ಲಿ ಮೃತ ವ್ಯಕ್ತಿಗೆ ಪಾಸಿಟಿವ್ ಇರೋದು ಇಂದು ದೃಢ ಪಟ್ಟಿದೆ. ಕೋವಿಡ್ ನಿಯಮಾವಳಿ ಪ್ರಕಾರವೇ ಅಧಿಕಾರಿಗಳು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ದಿನಕ್ಕೊಂದರಂತೆ ಸಂಭವಿಸುತ್ತಿರೋ ಕೊರೊನಾ ಸಾವಿನಿಂದ ಜನರು ಬೆಚ್ಚಿ ಬಿದ್ದಿದ್ದಾರೆ.