ವಿಜಯಪುರ : ರೈಲ್ವೇ ಪೋಲಿಸ್ ಠಾಣೆಯಲ್ಲಿ ಮಹಿಳಾ ಪೇದೆಯೊಬ್ಬರಿಗೆ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಪೋಲಿಸ್ ಠಾಣೆ ಸೀಲ್ ಡೌನ್ ಮಾಡಲಾಗಿದೆ. ಪೆಷೇಂಟ್ ನಂಬರ್ 14483, 26 ವರ್ಷದ ಮಹಿಳಾ ಪೇದೆ ಎಂದು ಗುರುತಿಸಲಾಗಿದೆ. ಪೇದೆಗೆ ಪಾಸಿಟಿವ್ ಬಂದ ಹಿನ್ನಲೆಯಲ್ಲಿ, ಪಿಎಸ್ಐ ಸೇರಿ 20 ಜನ ಪೊಲೀಸ್ ಸಿಬ್ಬಂದಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ. ಒಬ್ಬರು ರೈಲ್ವೇ ಪಿಎಸ್ಐ, 5 ಜನ ಮುಖ್ಯ ಪೇದೆ, 14 ಪೇದೆಗಳಿಗೂ ಕೊರೋನಾ ಆತಂಕ ಮನೆ ಮಾಡಿದೆ. ಕಳೆದ ಜೂನ್ 24 ರಂದು ಸ್ವಾಬ್ ನೀಡಿದ್ದ 21 ಜನ ರೈಲ್ವೇ ಪೊಲೀಸರು, ಈ ಪೈಕಿ ಮಹಿಳಾ ಪೇದೆಗೆ ಕೊರೋನಾ ಪಾಸಿಟಿವ್ ದೃಡವಾಗಿದೆ. ಪೋಲಿಸ್ ಠಾಣೆ ಸೀಲ್ ಡೌನ್ ಮಾಡಿದ ಪರಿಣಾಮ ಬಾಗಲಕೋಟೆಯ ಮೂವರು ರೈಲ್ವೇ ಪೊಲೀಸರಿಗೆ ವಿಜಯಪುರ ರೈಲ್ವೇ ಠಾಣೆಯ ಜವಾಬ್ದಾರಿ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಅವರು ಠಾಣೆಯ ಹೊರಗೆ ಟೇಬಲ್ ಹಾಕಿಕೊಂಡು ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ…