ಮಂಗಳೂರು : ಕೋವಿಡ್ ಸೋಂಕಿತರ ಮೃತದೇಹಗಳನ್ನು ಅಮಾನವೀಯವಾಗಿ ಅಂತ್ಯ ಕ್ರಿಯೆ ನಡೆಸುವ ಘಟನೆಗಳ ಮಧ್ಯೆ ಮಂಗಳೂರಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಮಾದರಿಯಾಗಿದ್ದಾರೆ. ಗೌರವಪೂರ್ವಕವಾಗಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಪಿಎಫ್ಐ ಕಾರ್ಯಕರ್ತರು ಅಂತ್ಯ ಸಂಸ್ಕಾರ ನಡೆಸುತ್ತಿದ್ದು ಗಮನಸೆಳೆಯುತ್ತಿದೆ. ಆರೋಗ್ಯ ಇಲಾಖೆಯಿಂದ ತರಬೇತಿ ಪಡೆದಿರುವ ಪಿಎಫ್ಐ ಸಂಘಟನೆ ಕಾರ್ಯಕರ್ತರು ಪರಿಪೂರ್ಣ ಧಾರ್ಮಿಕ ವಿಧಿ ವಿಧಾನ ಪೂರ್ಣಗೊಳಿಸಿ ಪಾರ್ಥಿವ ಶರೀರವನ್ನ ದಫನ ಮಾಡುತ್ತಾರೆ. ಅಲ್ಲದೇ ಕಾರ್ಯಕರ್ತರು ಸಂಪೂರ್ಣ ಮೈಮುಚ್ಚುವ ಪಿಪಿಇ ಕಿಟ್ ಧರಿಸಿ ಶವ ಸಂಸ್ಕಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ ಮೃತರಾದ 8 ಮಂದಿ ಮುಸ್ಲಿಂ ವ್ಯಕ್ತಿಗಳ ಮೃತದೇಹಗಳನ್ನ ಮಂಗಳೂರು ನಗರದ ವಿವಿಧ ಮಸೀದಿಗಳ ಖಬರ್ಸ್ಥಾನಗಳಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ .