ಮೈಸೂರು : ಕೆರೆಯಲ್ಲಿ ಈಜಾಡಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಹೆಚ್. ಡಿ ಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆಲನಹಳ್ಳಿ ಗ್ರಾಮದ ಪ್ರೀತಮ್ (12), ಅರ್ಜುನ್ (11) ಮೃತ ದುರ್ದೈವಿ ಬಾಲಕರು.
ಆಲನಹಳ್ಳಿಯ ಶಾಲೆಯಲ್ಲಿ 7ನೇ ತರಗತಿಯಲ್ಲಿ ಪ್ರೇಮ್ ವ್ಯಾಸಂಗ ಮಾಡುತ್ತಿದ್ದರೆ 6ನೇ ತರಗತಿಯಲ್ಲಿ ಅರ್ಜುನ್ ವ್ಯಾಸಂಗ ಮಾಡುತ್ತಿದ್ದಾನೆ.
ಕೊರೊನಾ ಹಿನ್ನಲೆ ಶಾಲೆಗಳಿಗೆ ರಜೆ ಇರುವುದರಿಂದ ಏಳೆಂಟು ಬಾಲಕರು ಕೆರೆಯಲ್ಲಿ ಈಜಾಡಲು ತೆರಳಿದ್ದಾರೆ.ಇತ್ತೀಚಿಗೆ ಕೆರೆಯಲ್ಲಿ ಹೂಳು ತೆಗೆಯಲಾಗಿತ್ತು.ಮಳೆ ಸುರಿದ ಪರಿಣಾಮ ಕೆರೆಯ ಒಂದು ಭಾಗದಲ್ಲಿ ಐದಾರು ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಈಜಾಡಲು ತೆರಳಿದ ವೇಳೆ ಮೂವರು ಬಾಲಕರು ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಇತರ ಬಾಲಕರು ಓರ್ವ ಬಾಲಕನನ್ನ ರಕ್ಷಣೆ ಮಾಡಿದ್ದಾರೆ. ಆದರೆ ಅರ್ಜುನ್, ಪ್ರೀತಮ್ ನೀರಿನಿಂದ ಹೊರಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳದಲ್ಲಿ ಮೃತ ಬಾಲಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಹೆಚ್. ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ಈಜಾಡಲು ತೆರಳಿದ್ದ ಬಾಲಕರು ನೀರುಪಾಲು
TRENDING ARTICLES