ಬಾಗಲಕೋಟೆ : ಜಿಲ್ಲೆಯಲ್ಲಿ ಅನ್ ಲಾಕ್ 2.0 ಬಳಿಕ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 208, ಸಾವನಪ್ಪಿದವರ ಸಂಖ್ಯೆ 05 ಕ್ಕೆರಿದೆ. ಇದ್ರಿಂದ ಜಿಲ್ಲಾಡಳಿತ ಮತ್ತಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳುವ ಮೂಲಕ ಮಹಾಮಾರಿಗೆ ಕಡಿವಾಣ ಹಾಕಲು ಸಜ್ಜಾಗಿದೆ. ಸ್ವತಃ ಜಿಲ್ಲಾಧಿಕಾರಿಗಳೆ ವಾರಿಯಸ್೯ ಜೋತೆ ಫೀಲ್ಡಿಗೆ ಎಂಟ್ರಿ ಕೊಡ್ತಿದ್ದಾರೆ. ಮದುವೆ, ಸಾವು, ಸಮಾರಂಭಗಳು ನಡೆದ ಸ್ಥಳಗಳಿಗೆ ಭೇಟಿ ನೀಡಿ ಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ ಜಿಲ್ಲಾಧಿಕಾರಿ ರಾಜೇಂದ್ರ. ಇನ್ನು ಕಳೆದ ನಾಲ್ಕೈದು ದಿನಗಳಲ್ಲಿ ಮಹಾಮಾರಿಯಿಂದ ಸಾವನ್ನಪ್ಪಿದವರ ಸಂಖ್ಯೆ ಜಿಲ್ಲೆಯಲ್ಲಿ 5 ಕ್ಕೆರಿದೆ. ಇದರ ಬೆನ್ನಲ್ಲೆ ಜಿಲ್ಲಾಧಿಕಾರಿಗಳು ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಕೆಳಮಟ್ಟದ ಅಧಿಕಾರಿಗಳ ಜೋತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾಹಿತಿ ಕಲೆ ಹಾಕುತ್ತಾ ವಾರಿಯಸ್೯ ಬೆನ್ನೆಲುಬಾಗಿ ನಿಂತಿದ್ದಾರೆ. ಇನ್ನು ಸಾರಿ ಮತ್ತು ಐಎಲ್ಐ ಸೋಂಕಿತರ ಪ್ರದೇಶದಲ್ಲಿ ಯಾವುದೇ ನಿರ್ಲಕ್ಷ ಮಾಡದೆ ಆ ಪ್ರದೇಶದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರನ್ನ ತಕ್ಷಣ ಆಸ್ಪತ್ರೆಗೆ ಅಡ್ಮಿಟ್ ಮಾಡುವಂತೆ ಸೂಚಿಸಿದ್ದಾರೆ. ಸೋಂಕಿತರಿಗೆ ಎಷ್ಟು ಬೇಗ ಚಿಕಿತ್ಸೆ ಕೊಡಿಸ್ತಿವೋ ಅಷ್ಟು ಭೇಗ ಅವರು ಗುಣಮುಖರಾಗ್ತಾರೆ. ಉಸಿರಾಟ, ಕೆಮ್ಮು, ನೆಗಡಿಯಿಂದ ಬಳಲುತ್ತಿರುವವರು ಬೇರೆ ಯಾವುದೇ ಮಾತ್ರೆಗಳನ್ನ ಬಳಸದೆ ತಕ್ಷಣ ಕೊರೋನಾ ವಾರಿಯಸ್೯ ನ ಸಂಪರ್ಕಿಸಿ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡ್ರು..