ಹಾಸನ: ತಾಲೂಕಿನ ಶಂಕದ ಕೊಪ್ಪಲು ಗ್ರಾಮದ ಬಳಿ ದನ ಮೇಯಿಸುತ್ತಿದ್ದ ಮಹಿಳೆ ತಲೆ ಒಡೆದು ರೈತ ಮಹಿಳೆ ಕೊರಳಲ್ಲಿದ್ದ ಚಿನ್ನದ ಸರ ಕಸಿದಿದ್ದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಖಾಸಗಿ ಕಾಲೇಜಿನಲ್ಲಿ ೨ನೇ ಪಿಯುಸಿ ಓದುತ್ತಿದ್ದ ಚಿಕ್ಕಕೊಂಡಗೊಳ
ಗ್ರಾಮದ ಚಂದನ್ ಎಂಬಾತ ಬೈಕ್ ನಲ್ಲಿ ತೆರಳಿ ಈ ಕೃತ್ಯ ಎಸಗಿದ್ದ. ಶಂಕದ ಕೊಪ್ಪಲು ನಿವಾಸಿ ಶಾರದಮ್ಮ ಎಂಬ ಮಹಿಳೆ ಜಮೀನು ಬಳಿ ದನ ಮೇಯಿಸುತ್ತಿದ್ದಾಗ ಅಲ್ಲಿಗೆ ತೆರಳಿದ್ದ ಕಳ್ಳ ವಿದ್ಯಾರ್ಥಿ, ಮಾಂಗಲ್ಯ ಸರ ಕೀಳಲು ಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ತೀವ್ರ ವಿರೋಧ ವ್ಯಕ್ತ ಪಡಿಸಿದಾಗ ಮರದ ತುಂಡಿನಿಂದ ಮಹಿಳೆ ತಲೆಗೆ ಹೊಡೆದು ಚಿನ್ನದ ಸರ ಕಿತ್ತಿದ್ದಾನೆ. ಮಹಿಳೆ ಕೂಗಾಟ ತಿಳಿದ ಸ್ಥಳೀಯರು ಓಡಿ ಬಂದಾಗ ಬೈಕ್ ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಗ್ರಾಮಾಂತರ ಠಾಣೆ ಪಿಎಸ್‌ಐ ಆರೋಕಿಯಪ್ಪ ಮತ್ತವರ ತಂಡ, ಗಂಭೀರ ಪೆಟ್ಟು ತಿಂದಿರುವ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಬೈಕ್ ಬಿಟ್ಟು ಹೋಗಿದ್ದ ಆರೋಪಿ, ಅಲ್ಲೇ ಹೊಂಚು ಹಾಕುತ್ತಿರುವುದನ್ನು ತಿಳಿದ ಪೊಲೀಸರು ಕೆಲವೇ ಹೊತ್ತಿನಲ್ಲಿ ಸ್ಥಳೀಯರ ನೆರವಿನಿಂದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾರದಮ್ಮ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ತಲೆ ಒಡೆದು ಮಹಿಳೆ ಸರ ಕಿತ್ತು ಸಿಕ್ಕಿಬಿದ್ದ ಪಿಯು ವಿದ್ಯಾರ್ಥಿ..!
TRENDING ARTICLES