Wednesday, January 22, 2025

ಖರ್ಗೆ ಸಿಹಿ ಸುದ್ದಿ ನಂಗೊತ್ತು …! ರೇಣುಕಾಚಾರ್ಯ

ದಾವಣಗೆರೆ: ಕರ್ನಾಟಕದ ಉಪಚುನಾಣ ಫಲಿತಾಂಶ ಡಿಸೆಂಬರ್ 9 ರಂದು ಹೊರ ಬೀಳಲಿದ್ದು , ಸರ್ಕಾರ ಉರುಳುತ್ತಾ ಉಳಿಯುತ್ತಾ ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ . ಡಿಸೆಂಬರ್ 9 ರ ನಂತರ ಸಿಹಿ ಸುದ್ದಿ ನೀಡುತ್ತೇನೆ ಎಂಬ ಖರ್ಗೆ ಹೇಳಿಕೆ ರಾಜಕೀಯದಲ್ಲಿ ಕುತೂಹಲ ಕೆರಳುವಂತೆ ಮಾಡಿದೆ . ಅನೇಕ ಮಂದಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ,

ಇದೀಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಮಾತನಾಡಿ , ಮಲ್ಲಿಕಾರ್ಜುನ ಖರ್ಗೆ ಕೊಡುವ ಸಿಹಿ ಸುದ್ದಿ ನಂಗೊತ್ತು ಎಂದಿದ್ದಾರೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು ಉಪ ಚುನಾವಣೆ ಬಳಿಕ ಪ್ರತಿಪಕ್ಷದ ಸ್ಥಾನ ಕಳೆದುಕೊಳ್ಳುತ್ತಾರೆ, ಇದನ್ನೇ ಕಾಂಗ್ರೆಸ್ ನಾಯಕ ಖರ್ಗೆ ಸಿಹಿ ಸುದ್ದಿ ಎಂದು ಭಾವಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ .
ಪತ್ರಕರ್ತರೊಂದಿಗೆ ಮಾತನಾಡಿದ ಅವರು ವಿಧಾನಸಭಾ ಉಪಚುನಾವಣ ಪ್ರಚಾರದಲ್ಲಿ ಸಿದ್ದರಾಮಯ್ಯ ಒಂಟಿಯಾಗಿದ್ದಾರೆ, ಯಾವ ನಾಯಕರು ಅವರ ಜೊತೆಯಲಿಲ್ಲ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಿದ್ದರಾಮಯ್ಯ ತಮ್ಮ ಸ್ಥಾನದಿಂದ ಕೆಳೆದುಕೊಳ್ಳುತ್ತಾರೆ ,ಇದು ಖರ್ಗೆ ಸೇರಿದಂತೆ ಹಲವು ನಾಯಕರಿಗೆ ಸಿಹಿ ಸುದ್ದಿಯಾಗಲಿದೆ ಎಂದರು .

RELATED ARTICLES

Related Articles

TRENDING ARTICLES