Sunday, December 22, 2024

ಸಿದ್ದರಾಮಯ್ಯ ಬಿಜೆಪಿಗೆ …!

ಬೆಳಗಾವಿ: ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಇಂದು ಮತದಾನದ ದಿನ ಮತ್ತೊಂದು ಅಚ್ಚರಿಕೆಯ ಹೇಳಿಕೆ ಕೊಟ್ಟಿದ್ದಾರೆ , ಸಿದ್ದರಾಮಯ್ಯ ಬಗ್ಗೆ ನಾನು ಹಗುರವಾಗಿ ಮಾತನಾಡುವುದಿಲ್ಲ . ಮುಂದಿನ ದಿನಗಳಲ್ಲಿ ಅವರನ್ನು ಬಿಜೆಪಿಗೆ ಕರೆದುಕೊಂಡು ಬರುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ .
ಬಸ್ ಸ್ಟಾಂಡ್ ಹೂ,ಎಸ್ ಟಿ ಡಿ ಬೂತ್ ಚಿಲ್ಲರೆ ಎಣಿಸಿದ ಹೆಣ್ಣು ಮಗಳ ಬಗ್ಗೆ ನಾನು ಮಾತನಾಡಲ್ಲ ಎನ್ನುತ್ತಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ವ್ಯಂಗ್ಯ ಮಾತುಗಳಲ್ಲಿ ತಿವಿದ ರಮೇಶ್ ಜಾರಕಿಹೊಳಿ , ತಮ್ಮ ಪ್ರತಿಸ್ಪರ್ಧಿ ಲಖನ್ ಜಾರಕಿಹೊಳಿ ಅವರನ್ನು ತರಾಟೆಗೆ ತೆಗೆದುಕೊಂಡರು , ಅತನ ನೆರಳು ಸಹ ನನ್ನ ಜೊತೆ ಇರುವುದು ಬೇಡ .ಹರಾಮಿ ದುಡ್ಡನ್ನು ಖಾಲಿ ಮಾಡಲು ಅತ ಚುನಾವಣೆಗೆ ಸ್ಪರ್ಧಿಸಿದ್ದಾನೆ ಎಂದರು .
ಸತೀಶ್ ತುಳಿದಷ್ಟೂ ನಾನು ಬೆಳೆದಿದ್ದೇನೆ ,ಮುಂದಿನ ದಿನಗಳಲ್ಲಿ ಅಂಬಿರಾವ್ ಪಾಟೀಲ್ ಅವರನ್ನು ಸತೀಶ್ ಮತ್ತು ಲಖನ್ ವಿರುದ್ಧ ಸ್ಪರ್ಧಿವಂತೆ ಮಾಡುತ್ತೇನೆ ಎಂದು ಸವಾಲು ಹಾಕಿದರು . ಅಲ್ಲದೆ ಬೆಳಗಾವಿ ಉಸಾಬರಿ ಬಿಟ್ಟರೆ ಡಿಕೆ ನನಗೆ ಒಳ್ಳೆಯ ಸ್ನೇಹಿತ ಎಂದ ರಮೇಶ್ ಜಾರಕಿಹೊಳಿ ಮಾತು ಗಮನಾರ್ಹವಾಗಿತ್ತು.

RELATED ARTICLES

Related Articles

TRENDING ARTICLES