ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿನ್ನೆ ಮತ್ತು ಇಂದು ನಡೆದ ಸಭೆಯಲ್ಲಿ ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಸದ್ಯದ ವಿಷಯ ಬೆಂಗಳೂರು ಲಾಕ್ಡೌನ್ ಆಗುತ್ತಾ? ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಯಾವುದೇ ಕಾರಣಕ್ಕು ಮತ್ತೆ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಏಕೆಂದರೆ ಮಾರ್ಚ್ನಿಂದ ಲಾಕ್ಡೌನ್ ಮಾಡಿದ ಕಾರಣ ಎಷ್ಟೋ ಜನರು ಲಾಕ್ ಡೌನ್ನಿಂದ ಅಲ್ಲ ಹಸಿವಿನಿಂದಲೇ ಪ್ರಾಣ ತ್ಯಜಿಸಿದ್ದಾರೆ. ಇದನ್ನಲ್ಲ ಪರಿಶೀಲಿಸಿ ಸರ್ವ ಪಕ್ಷ ಸಭೆ ನಡೆಸಿ ಲಾಕ್ಡೌನ್ ಬೇಡ ಎಂದು ಬಿಜೆಪಿ ನಿರ್ಧರಿಸಿದೆ.
ಇನ್ನೂ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಅರಿತ ಸಿಎಂ ಹಂತ ಹಂತವಾಗಿ ಲಾಕ್ಡೌನ್ ಸಡಿಲಗೊಳಿಸಿದ್ದಾರೆ. ಇನ್ನೂ ಈಗ ಮತ್ತೆ ಲಾಕ್ಡೌನ್ ಮುಂದುವರೆಸಿದರೆ ಇನ್ನೂ ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ಕುಸಿಯಲಿದೆ. ಎಂದು ಹೇಳಿದರು .
ನಿನ್ನೆ ಆರ್.ಅಶೋಕ್ ಹೇಳಿಕೆ ಇನ್ನೂ ಬೆಂಗಳೂರು ಜನತೆಗೆ ಸಿಟ್ಟುಗೇರಿಸಿದೆ. ಏಕೆಂದರೆ ನಮ್ಮ ಬೆಂಗಳೂರಿನಲ್ಲಿ ಕಳೆದ 6 ದಿನಗಳಿಂದ ಕೊರೊನಾ ಕೇಸ್ಗಳು ಶತಕ ಬಾರಿಸುತ್ತಿದ್ದು ಈಗ ಹಂತ ಹಂತ ವಾಗಿ ಕಡಿಮೆ ಆಗುತ್ತಿದೆ ಎಂಬ ಹೇಳಿಕೆ ನೀಡಿದ್ದರೆ.
ಬಡವರ, ಕೂಲಿ ಕಾರ್ಮಿಕರ ಕಷ್ಟ ಅರಿತ ಸಿಎಂ ಯಡಿಯೂರಪ್ಪ ಲಾಕ್ಡೌನ್ ಇನ್ನೂ ಮಾಡಲ್ಲ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದು ಎಲ್ಲಾ ನಿರ್ಧಾರಗಳನ್ನ ಜನತೆಗೆ ಬಿಟ್ಟಿದ್ದಾರೆ…
ಲಾಕ್ಡೌನ್ ಮಾಡುವ ಪ್ರಶ್ನೆಯೇ ಇಲ್ಲ – ಸಿಎಂ ಯಡಿಯೂರಪ್ಪ
TRENDING ARTICLES