Monday, January 13, 2025

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ SSLC‌ ಪರೀಕ್ಷೆಗೆ 1,658 ವಿದ್ಯಾರ್ಥಿಗಳು ಗೈರು..!

ಚಿಕ್ಕೋಡಿ: ಕೊರೊನಾ ಮಧ್ಯದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು ದಾಖಲಾದ ಮಕ್ಕಳು 40,436 ಪರೀಕ್ಷೆಗೆ ಹಾಜರಾದ ಮಕ್ಕಳು 38,778 ಹಾಗೂ 1658 ಮಕ್ಕಳು ಇಂಗ್ಲೀಷ್ ಪರೀಕ್ಷೆಗೆ ಗೈರಾಗಿದ್ದಾರೆ ಎಂದು ಚಿಕ್ಕೋಡಿ ಡಿಡಿಪಿಐ ತಿಳಿಸಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾರ್ಗಸೂಚಿಯನ್ನು ಚಾಚು ತಪ್ಪದೇ ಪಾಲಿಸುವ ಮೂಲಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆದಿದ್ದು, ಲಾಕ್‍ಡೌನ್‍ನಿಂದಾಗಿ ಸುಮಾರು ಒಂದು ತಿಂಗಳ ಕಾಲ ಮುಂದೂಡಲ್ಪಟ್ಟಿದ್ದು ನಿನ್ನೆ ಮೊದಲ ಪರೀಕ್ಷೆ ಮುಗಿದಿದೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಂಟು ವಲಯಗಳಿದ್ದು ಅಥಣಿ -165, ಕಾಗವಾಡ – 52, ಚಿಕ್ಕೋಡಿ -367, ನಿಪ್ಪಾಣಿ -132, ಗೋಕಾಕ – 113, ಮೂಡಲಗಿ – 203, ಹುಕ್ಕೇರಿ – 121, ರಾಯಬಾಗ – 505 ಹೀಗೆ ಒಟ್ಟು 1,658 ವಿದ್ಯಾರ್ಥಿಗಳು ಗೈರಾಗಿದ್ದಾರೆ. ನಿನ್ನೆ ಎಸ್ಎಸ್ಎಲ್‌ಸಿ ಮೊದಲ ಪರೀಕ್ಷೆ ಆಗಿದ್ದರಿಂದ ಪರೀಕ್ಷೆ ಆರಂಭಗೊಳ್ಳುವ ಮುನ್ನವೇ ಸುಮಾರು 2 ಗಂಟೆ ಮೊದಲು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಬಂದಿದ್ದರು. ಪರೀಕ್ಷೆ ಬರೆಯಲು ಬಂದ ಎಲ್ಲ ವಿದ್ಯಾರ್ಥಿಗಳಿಗೆ ಭಾರತ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಿಂದ ಉಚಿತ ಮಾಸ್ಕ್ ವಿತರಿಸುವ ಜೊತೆಗೆ ಸ್ಯಾನಿಟೈಸರ್ ವಿತರಿಸಿ  ಆರೋಗ್ಯ ತಪಾಸಣೆ ನಡೆಸಿದರು.

RELATED ARTICLES

Related Articles

TRENDING ARTICLES