ಬಳ್ಳಾರಿ : ಬಳ್ಳಾರಿಯ ತೆಕ್ಕಲಕೋಟೆ ಪಟ್ಟಣದಲ್ಲಿ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಗೆ ಕೊರೊನಾ ಪಾಸಿಟಿವ್ ಬಂದಿದೆ. ನಿನ್ನೆಯಷ್ಟೇ ಹತ್ತಿರದ ಸಿರುಗುಪ್ಪ ದಲ್ಲಿ ಒಬ್ಬ ಬ್ಯಾಂಕ್ ಮ್ಯಾನೇಜರ್ ಗು ಸಹ ಕೊರೊನಾ ವಕ್ಕರಿಸಿತ್ತು. ಇಂದು ತೆಕ್ಕಲಕೋಟೆಯ ಸಿಂಡಿಕೇಟ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಮ್ಯಾನೇಜರ್ 29 ವರ್ಷದ ಯುವಕರಾಗಿದ್ದು ತೆಕ್ಕಲಕೋಟೆಯ ಸಿಂಡಿಕೇಟ್ ಬ್ಯಾಂಕ್ ಅಲ್ಲಿ ಕೆಲಸ ನಿರ್ವಹಿಸ್ತಾ ಇದ್ರು. ವ್ಯಕ್ತಿಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆದಿದ್ದರೂ ಜ್ವರ ಕಡಿಮೆಯಾಗಿರಲಿಲ್ಲ. ಹೀಗಾಗಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ವರದಿಯಲ್ಲಿ ಪಾಸಿಟಿವ್ ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ಹತ್ತಿರದ ಬೆಳಗಲ್ ಮೂಲದ ವ್ಯಕ್ತಿಗೆ ಕೊರೊನಾ ಬಂದಿತ್ತು. ಆ ವ್ಯಕ್ತಿಯ ಸಂಪರ್ಕದಿಂದ ಬ್ಯಾಂಕ್ ಸಿಬ್ಬಂದಿಗೆ ಬಂದಿರಬಹುದಾ ಅಥವಾ ಇನ್ಯಾವ ಸಂಪರ್ಕ ಇರಬಹುದು ಅಂತ ಆರೋಗ್ಯ ಇಲಾಖೆ ಈಗಷ್ಟೇ ತಲಾಶ್ ನಡೆಸಿದೆ.
ಸದ್ಯಕ್ಕೆ ಬ್ಯಾಂಕ್ ಸೀಲ್ ಡೌನ್ ಮಾಡಿರೋ ಅಧಿಕಾರಿಗಳು ಮ್ಯಾನೇಜರ್ ಪ್ರಾಥಮಿಕ ಸಂಪರ್ಕವನ್ನ ಕಲೆಹಾಕ್ತಿದಾರೆ.
ಸ್ಥಳಕ್ಕೆ ತಹಶೀಲ್ದಾರ್ ಆದಿಯಾಗಿ ಇನ್ನಿತರ ಅಧಿಕಾರಿಗಳು ದೌಡಾಯಿಸಿದ್ದು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ 24 ಗಂಟೆಯಲ್ಲಿ ಇಬ್ಬರು ಬ್ಯಾಂಕ್ ಮ್ಯಾನೇಜರ್ ಗೆ ಕೊರೊನಾ ವಕ್ಕರಿಸಿದೆ.
ಅರುಣ್ ನವಲಿ ಪವರ್ ಟಿವಿ ಬಳ್ಳಾರಿ