Sunday, January 12, 2025

ನಾಟಿ ವೈದ್ಯ ನಾರಾಯಣ ಮೂರ್ತಿ ಇನ್ನಿಲ್ಲ.- ಹೃದಯಾಘಾತದಿಂದ ನಿಧನ.

ಶಿವಮೊಗ್ಗ :  ದೇಶ, ವಿದೇಶದಲ್ಲಿ ಖ್ಯಾತರಾಗಿದ್ದ, ಶಿವಮೊಗ್ಗದ ಸಾಗರದ ಆನಂದಪುರ ನರಸೀಪುರದ ನಾಟಿವೈದ್ಯ ನಾರಾಯಣ ಮೂರ್ತಿ ನಿಧನರಾಗಿದ್ದಾರೆ. ನಿನ್ನೆ ರಾತ್ರಿ ಅವರಿಗೆ ಹೃದಯಾಘಾತವಾಗಿದ್ದು, ಸಾಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು, ಫಲ ನೀಡಿಲ್ಲ. ಇನ್ನು ಮೃತರಿಗೆ 80 ವರ್ಷ ವಯಸ್ಸಾಗಿತ್ತು. ವೈದ್ಯ ನಾರಾಯಣ ಮೂರ್ತಿಯವರು, ಆಯುರ್ವೇದಿಕ್ ಔಷಧೋಪಚಾರದಿಂದ ದಿನನಿತ್ಯ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಇವರ ಬಳಿ ದೇಶದ ವಿವಿಧ ಮೂಲೆಯಿಂದ ಚಿಕಿತ್ಸೆಗಾಗಿ ಬರುತ್ತಿದ್ದರು. ಕಳೆದ ಹಲವಾರು ದಶಕಗಳಿಂದ ಕ್ಯಾನ್ಸರ್ ಹಾಗೂ ಮಾರಕ ಪೀಡಿತ ಕಾಯಿಲೆಗಳಿಗೆ ಔಷಧವನ್ನು ನೀಡುತ್ತಿದ್ದ, ನಾಟಿ ವೈದ್ಯ ನಾರಾಯಣಮೂರ್ತಿಯವರು, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಸಾವಿರಾರು ಜನರಿಗೆ ಕೊನೆಯ ಆಶಾಕಿರಣವಾಗಿದ್ದರು.

ನಾಟಿ ವೈದ್ಯ ನಾರಾಯಣ ಮೂರ್ತಿಯವರ ಬಳಿ ದೇಶ ವಿದೇಶದಿಂದ ವಿವಿಧ ಖಾಯಿಲೆಗಳಿಗೆ ಚಿಕಿತ್ಸೆ ಔಷಧಿ ಪಡೆಯಲು ಬರುತ್ತಿದ್ದರು. ಇವರು ತಾವೇ ಕಾಡಿನಿಂದ ಗಿಡಮೂಲಿಕೆಗಳನ್ನ ಆರಿಸಿಕೊಂಡು ಬಂದು ಔಷಧಿಗಳನ್ನು ಸಿದ್ಧ ಪಡಿಸುತ್ತಿದ್ದರು. ಯಾರಿಂದಲೂ ಏನನ್ನೂ ಪ್ರತಿಯಾಗಿ ಇಚ್ಛಿಸದ ಇವರು ಮಾಧ್ಯಮ ಜಗತ್ತಿನಿಂದಲೂ ಬಹುದೂರ ಉಳಿದಿದ್ದರು. ಉಚಿತವಾಗಿ ಔಷಧಿ ನೀಡುತ್ತಿದ್ದ ಇವರು ಕೇವಲ 200 ರೂ. ಗಳನ್ನ ಪಡೆಯುತ್ತಿದ್ದರು. ಆಸ್ಫತ್ರೆ ಗಳು ಲಕ್ಷ ಲಕ್ಷ ಸುಲಿಗೆ ಮಾಡುವ ಈ ದಿನಗಳಲ್ಲಿ ಇವರು ನಿಜಕ್ಕೂ ಮಾದರಿಯಾಗಿದ್ದರು.

ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಹೊರಟರೆ ಸುಮಾರು 45 ಕಿ.ಮಿ. ದೂರದಲ್ಲಿ ಸಿಗುವ ಆನಂದಪುರ ದಲ್ಲಿ ಇಳಿದು ಅಲ್ಲಿಂದ ಆಟೋ ಅಥವಾ ಬಸ್ ನಲ್ಲಿ ಶಿಕಾರಿಪುರ ಮಾರ್ಗವಾಗಿ ಸುಮಾರು 10 ಕಿ.ಮಿ. ದೂರದಲ್ಲಿ ಇರುವ ನರಸೀಪುರದಲ್ಲಿ ಸುಮಾರು ಒಂದು ಕಿ.ಮಿ. ದೂರ ಕಾಲ್ನಡಿಗೆಯ ಪ್ರಯಾಣಿಸಿದರೆ, ಇವರ ಮನೆ ಸಿಗುತ್ತದೆ. ವಿವಿಧ ಮರದ ತೊಗಟೆಗಳು, ಬೇರುಗಳ ಕಷಾಯ ಮಾಡಿ ನೀಡುವುದರ ಜೊತೆಗೆ, ಔಷಧಿ ಪುಡಿಗಳನ್ನು ಮತ್ತು ಬೇರುಗಳನ್ನು ನೀಡುತ್ತಿದ್ದರು.: ಡಯಾಬಿಟಿಸ್, ಚರ್ಮರೋಗಗಳು, ಕ್ಯಾನ್ಸರ್, ಅಲರ್ಜಿ, ಗರ್ಭಕೋಶದ ಸಮಸ್ಯೆ, ಕೀಲು, ಮೂಳೆ ಸಮಸ್ಯೆ, ನರ ದೌರ್ಬಲ್ಯಗಳು, ತಲೆನೋವು ಇತರೆ ರೋಗಗಳಿಗೆ ಔಷಧಿಗಳನ್ನು ಕೇವಲ ಗುರುವಾರ ಮತ್ತು ಭಾನುವಾರವಷ್ಟೇ ನೀಡುತ್ತಿದ್ದರು.

ವಿವಿಧ ಖಾಯಿಲೆಗಳಿಗೆ ನಾಟಿ ವೈದ್ಯಕೀಯದ ಮೂಲಕ ಚಿಕಿತ್ಸೆ ನೀಡುತ್ತಿದ್ದ, ನಾರಾಯಣಮೂರ್ತಿಗಳು, ಸಾವಿರಾರು ರೋಗಿಗಳಿಗೆ ಗುಣಪಡಿಸಿದ್ದರು. ಪ್ರತಿನಿತ್ಯ ಸೇವೆ ಮಾಡುವ ಇವರ ನಾಟಿ ವ್ಯದ್ಯಕೀಯವನ್ನ ‘ನ್ಯಾಷನಲ್ ಜಿಯಾಗ್ರಾಫಿಕ್ ಚಾನಲ್’ ಇದೊಂದು ಅಪರೂಪದ ವೈದ್ಯಕೀಯ ರೀತಿ ಎಂದು ಶ್ಲಾಘಿಸಿತ್ತು.

RELATED ARTICLES

Related Articles

TRENDING ARTICLES