Sunday, January 12, 2025

 ಹೊರನಾಡು ಟೆಂಪಲ್‌ ಓಪನ್

ಚಿಕ್ಕಮಗಳೂರು: ಕೊರೋನ ಆತಂಕದಿಂದ ಕಳೆದ ಮೂರು ತಿಂಗಳಿಂದ ಬಾಗಿಲು ಹಾಕಿದ್ದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಜುಲೈ 1 ರಿಂದ ತೆರೆಯಲಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ‌. ಆದರೆ, ದೇವಾಲಯ ಆಡಳಿತ ಮಂಡಳಿ ಭಕ್ತರ ಆರೋಗ್ಯದ ದೃಷ್ಠಿಯಿಂದ ಕೆಲವೊಂದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಭಕ್ತರು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿಕೊಂಡಿದೆ. ದೇವಾಲಯಕ್ಕೆ ಬರುವ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಆನ್ ಲೈನ್ ನಲ್ಲಿ ಪಾಸ್ ಪಡೆದು ಬರಬೇಕು. ಆನ್ ಲೈನ್ ನಲ್ಲಿ ದರ್ಶನದ ಟಿಕೆಟ್ ಇಲ್ಲದಿದ್ರೆ ಅಂತವರಿಗೆ ಪ್ರವೇಶಕ್ಕೆ ನಿರ್ಭಂದ. ದರ್ಶನದ ಟಿಕೆಟ್ ಪ್ರಿಂಟ್ ಔಟ್ ಸಮೇತ ಒಂದು ಗಂಟೆ ಮುಂಚೆ ಬಂದು ದೇವಾಲಯದಲ್ಲಿ ತಪಾಸಣೆಗೆ ಒಳಪಡಬೇಕು. ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ದರ್ಶನಕ್ಕೆ ಅವಕಾಶವಿದ್ದು, 10 ವರ್ಷ ಒಳಗಿನ ಮಕ್ಕಳು, 65 ವರ್ಷ ದಾಟಿದ ವೃದ್ಧರು ಹಾಗೂ ಗರ್ಭೀಣಿಯರಿಗೆ ಪ್ರವೇಶ ಇರುವುದಿಲ್ಲ. ದೇವಾಲಯದ ಒಳ ಬಂದವರು ಪೂಜೆ ಮುಗಿಸಿ, ಪ್ರಸಾದ ಸೇವಿಸಿಯೇ ಹೋರಹೋಗಬೇಕು, ಮಧ್ಯೆ-ಮಧ್ಯೆ ಹೊರಬಿಡುವುದಿಲ್ಲ. ದೇವರ ಮುಂದೆ ಕೂರಿಸಿ ಅರ್ಚನೆ, ಸಮರ್ಪಣೆ ಮಾಡುವುದಿಲ್ಲ. ಪ್ರಸಾದ ಭೋಜನೆಯ ಬಳಿಕ ಊಟದ ತಟ್ಟೆಯನ್ನ ಭಕ್ತರೇ ಶುಚಿಯಾಗಿ ತೊಳೆದಿಡುವುದು ಸೇರಿದಂತೆ ದೇವಾಲಯದ ಆಡಳಿತ ಮಂಡಳಿ ಸುಮಾರು 25 ನಿಬಂಧನೆಗಳನ್ನ ಭಕ್ತರಿಗೆ ವಿಧಿಸಿದ್ದು, ಭಕ್ತರು ಸಹಕರಿಸುವಂತೆ ಮನವಿ ಮಾಡಿದೆ. ದೇವಾಲಯಗಳನ್ನ ತೆರೆಯಲು ಸರ್ಕಾರ ಜೂನ್ 8 ರಂದು ಅನುಮತಿ ನೀಡಿದ್ದರು, ದೇವಾಲಯದ ಆಡಳಿತ ಮಂಡಳಿ ಭಕ್ತರ ಆರೋಗ್ಯದ ಹಿತದೃಷ್ಠಿಯಿಂದ ಬಾಗಿಲು ತೆರೆದಿರಲಿಲ್ಲ

RELATED ARTICLES

Related Articles

TRENDING ARTICLES