Sunday, January 12, 2025

 SSLC ಪರೀಕ್ಷೆ – ಟೀಚರ್ಸ್ ಗೆ ತರಬೇತಿ

ಚಿಕ್ಕಮಗಳೂರು:ಕೊರೋನ ಆತಂಕದಿಂದ ಸ್ಥಗಿತಗೊಂಡಿದ್ದ ಎಸ್.ಎಸ್.ಎಲ್.ಸಿ.  ಪರೀಕ್ಷೆಯನ್ನ ನಡೆಸಲು ಸರ್ಕಾರ ಮುಂದಾಗಿದ್ದು, ಸುಸೂತ್ರ ಪರೀಕ್ಷೆ ಹಾಗೂ ಮಕ್ಕಳ ಹಿತದೃಷ್ಠಿಯಿಂದ ಎಲ್ಲಾ ಮುಂಜಾಗೃತ ಕ್ರಮಗಳೊಂದಿಗೆ ಸರ್ಕಾರ ಪರೀಕ್ಷೆ ನಡೆಸಲು ಮುಂದಾಗಿದೆ‌. ಚಿಕ್ಕಮಗಳೂರು ಜಿಲ್ಲಾಡಳಿತ ಎಲ್ಲಾ ಕ್ರಮಕೈಗೊಂಡು ಮಕ್ಕಳನ್ನ ಯಾವ ರೀತಿ ಪರೀಕ್ಷಾ ಕೇಂದ್ರಕ್ಕೆ ಕಳಿಸಬೇಕೆಂದು ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಯಲ್ಲಿ ಸರ್ಕಾರ ಎಲ್ಲಾ ಸಿದ್ಧತೆ ಮಾಡಿದೆ. ವಿದ್ಯಾರ್ಥಿಗಳು ಶಾಲಾ ಕಾಂಪೌಂಡ್ ಒಳ ಪ್ರವೇಶಿಸುತ್ತಿದ್ದಂತೆ ಹೇಗೆ ನಿಲ್ಲಬೇಕು, ಎಲ್ಲಿ ನಿಲ್ಲಬೇಕು, ಹೇಗೆ ಸಾಗಬೇಕು ಎಂದು ಪ್ರತಿಯೊಂದನ್ನು ಶಿಕ್ಷಕರಿಗೆ ತರಬೇತಿ ನೀಡಿದ್ದು ನಾಳೆ ಶಿಕ್ಷಕರು ಮಕ್ಕಳನ್ನ ಅದೇ ರೀತಿ ಪರೀಕ್ಷಾ ಕೇಂದ್ರಕ್ಕೆ ಕಳಿಸಬೇಕಿದೆ. ಈಗಾಗಲೇ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಬಳಿಕ ವಿದ್ಯಾರ್ಥಿಗಳು ಹೋಗುವ ಪ್ರತಿಯೊಂದು ರೂಮಿನ ಬಾಗಿಲವರೆಗೂ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಬಾಕ್ಸ್ಗಳನ್ನ ಹಾಕಲಾಗಿದೆ. ಇಂದು ಶಿಕ್ಷಕರಿಗೆ ಅದೇ ರೀತಿ ತರಬೇತಿ ನೀಡಲಾಗಿದೆ…

RELATED ARTICLES

Related Articles

TRENDING ARTICLES