Sunday, January 12, 2025

ಐದು ಪಟ್ಟು ಹಣದ ಆಸೆಗೆ ಲಕ್ಷ ಕಳೆದುಕೊಂಡ ಮಹಿಳೆ

ಹಾಸನ: 1 ಲಕ್ಷಕ್ಕೆ 5 ಲಕ್ಷ ಹಣ ಕೊಡುವುದಾಗಿ ನಂಬಿಸಿ ಪಂಗನಾಮ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂನ್ 20 ರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಆಡುವಳ್ಳಿ 1ನೇ ಕ್ರಾಸ್ ನಿವಾಸಿ ಶಾಹೀನಾ ಎಂಬುವರು ಕಂದಾಯ ಕಟ್ಟಲು ನಗರಸಭೆ ಬಳಿ ಹೋಗಿ ಪರಿಚಿತರೊಂದಿಗೆ ಮಾತನಾಡಿಕೊಂಡು ಹೋಗುತ್ತಿದ್ದರು. ಈ ವೇಳೆ ಎಂಟ್ರಿ ಕೊಟ್ಟ ಅನಾಮಿಕ ವ್ಯಕ್ತಿ ನಾನು ನಿಮ್ಮ ವಾರ್ಡ್‍ನ ಕೌನ್ಸಿಲರ್ ಸ್ನೇಹಿತ. ಇತ್ತೀಚೆಗೆ ಒಂದು ಹೊಸ ಸ್ಕೀಂ ಬಂದಿದೆ. ಅದು ಕೇವಲ 25 ಜನರಿಗೆ ಮಾತ್ರ. ಆ ಯೋಜನೆಯ ಲಾಭವೇನೆಂದರೆ ನೀವು ಒಂದು ಲಕ್ಷ ರೂ. ನೀಡಿದರೆ ನಾವು 5 ಲಕ್ಷ ರೂ. ಕೊಡುತ್ತೇವೆ ಎಂದು ಬಣ್ಣದ ಮಾತುಗಳನ್ನಾಡಿ ನಂಬಿಸಿದ. 1 ಲಕ್ಷಕ್ಕೆ 5 ಪಟ್ಟು ಹಣ ಸಿಗಲಿದೆ ಎಂಬ ಆಸೆಗೆ ಬಿದ್ದ ಮಹಿಳೆ ಓಕೆ ಎಂದು ಬಿಟ್ಟಳು. ಅಷ್ಟೇ ಅಲ್ಲ ಅನಾಮಿಕನಿಗೆ 1 ಲಕ್ಷ ರೂ. ಹಣ ಕೊಟ್ಟು ಆಧಾರ್ ಕಾರ್ಡ್ ಸಹ ನೀಡಿದ್ದಾರೆ.

ಕೆಲವೇ ಹೊತ್ತಿನಲ್ಲಿ 1 ಲಕ್ಷ ರೂ. ಸಿಕ್ಕಿದ್ದೇ ತಡ ಯಾರಿಗುಂಟು, ಯಾರಿಗಿಲ್ಲ ಎಂದು ಆಸಾಮಿ ಹಣ ಪಡೆದು ಪರಾರಿಯಾಗಿದ್ದಾನೆ. ಅದಾದ ಬಳಿಕ ಬಣ್ಣದ ಮಾತಿಗೆ ಮರುಳಾಗಿ ಹೋದ ಮಹಿಳೆ, ನನ್ನ ಹಣ ಕೊಡಿಸಿಕೊಡಿ ಎಂದು ನಗರಠಾಣೆ ಪೊಲೀಸರಿಗೆ ದೂರು  ನೀಡಿದ್ದಾರೆ.

RELATED ARTICLES

Related Articles

TRENDING ARTICLES