ಮಂಡ್ಯ: ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಷ್ಠೆಯ ವಾರ್ ಶುರುವಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಕೆ.ಸುರೇಶ್ ಗೌಡ, ಶಾಸಕರಾಗಿ ಆಯ್ಕೆಯಾಗಿದ್ದರು.
ಕಳೆದ ಚುನಾವಣೆಯಲ್ಲೇ ಜೆಡಿಎಸ್ ಟಿಕೆಟ್ ಗಾಗಿ ಶಿವರಾಮೇಗೌಡ ಹಾಗೂ ಸುರೇಶ್ ಗೌಡರ ನಡುವೆ ಪೈಪೋಟಿ ಇತ್ತು.ಅಂತಿಮವಾಗಿ ಕೆ.ಸುರೇಶ್ ಗೌಡರಿಗೆ ಜೆಡಿಎಸ್ ಟಿಕೆಟ್ ಫೈನಲ್ ಮಾಡಿದ ಪಕ್ಷದ ವರಿಷ್ಟರು, ಶಿವರಾಮೇಗೌಡರನ್ನೂ ಸಕ್ರಿಯವಾಗಿಸುರೇಶ್ ಗೌಡರ ಪರ ಚುನಾವಣೆಯಲ್ಲಿ ಕೆಲಸ ಮಾಡುವಂತೆ ಮನವೊಲಿಸಿದ್ರು.
ಇದೀಗ, ಮತ್ತೆ ಶಿವರಾಮೇಗೌಡ ಚುನಾವಣೆ ಮಾತುಗಳನ್ನಾಡ್ತಿದ್ದಾರೆ. ಅದರಲ್ಲೂ, ನಾನೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅಂತಿದ್ದಾರೆ.
ಹಾಲಿ ಶಾಸಕ ಕೆ.ಸುರೇಶ್ ಗೌಡ ವಿರುದ್ಧ ಆಕ್ರೋಶ:
ನಾಗಮಂಗಲ ಜೆಡಿಎಸ್ ನಲ್ಲಿ ಚುನಾವಣೆಗೆ ಇನ್ನೂ 3 ವರ್ಷ ಇರೋವಾಗ್ಲೇ ಶುರು ಟಿಕೆಟ್ ವಾರ್ ಶುರುವಾಗಿದೆ.ಮುಂದಿನ ಚುನಾವಣೆಗೆ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಎಲ್.ಆರ್.ಶಿವರಾಮೇಗೌಡ ಘೋಷಣೆ ಮಾಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಶಾಸಕ ಸುರೇಶ್ ಗೌಡರ ಗೆಲುವಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೆಸರಿನ ಅಲೆಯೇ ಕಾರಣ.ಸುರೇಶ್ ಗೌಡರ ಗುಂಪುಗಾರಿಕೆ ರಾಜಕಾರಣದಿಂದ ಪಕ್ಷದ ಕಾರ್ಯಕರ್ತರಿಗೆ ಬೇಸರವಾಗಿದೆ.
ಯಾರ ಗಡಿಯಾರ ನಡೆಯುತ್ತೋ ಅವರಿಗೆ ಪಕ್ಷ ಟಿಕೇಟ್ ನೀಡಲಿದೆ.
ಸುರೇಶ್ ಗೌಡ ಎಳೆ ಮಗುವಲ್ಲ. ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವುದು, ಬಿಡುವುದು ಅವರ ಹಣೆಬರಹ.ನನಗೆ ಕ್ಷೇತ್ರದಲ್ಲಿ ನನ್ನದೇ ಆದ ಮತ ಬ್ಯಾಂಕ್ ಇದೆ.ಹೀಗಾಗಿ, ನಾನೇ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡ್ತೀನಿ ಅಂತಾ ಸ್ಪಷ್ಟಪಡಿಸಿದ್ರು.
ಜಿಲ್ಲಾದ್ಯಂತ ಭ್ರಷ್ಟಾಚಾರ ತಾಂಡವವಾಡುತ್ತಿದೆ:
ಜಿಲ್ಲಾದ್ಯಂತಭ್ರಷ್ಟಾಚಾರ ತಾಂಡವವಾಡುತ್ತಿದೆ.ಮಧ್ಯವರ್ತಿಗಳ ಹಾವಳಿಯಿಂದ ಜಿಲ್ಲೆಯ ಎಲ್ಲಾ ಕಚೇರಿಗಳು ವ್ಯಾಪಾರೀಕರಣ ಕೇಂದ್ರಗಳಾಗಿವೆ.ಜಿಲ್ಲಾಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು.ಇಲ್ಲವಾದರೆ, ಜಿಲ್ಲಾಡಳಿತದ ವಿರುದ್ದ ನಾಗಮಂಗಲದಿಂದಲೇ ಹೋರಾಟ ಪ್ರಾರಂಭ ಮಾಡುವ ಎಚ್ಚರಿಕೆ ನೀಡಿದರು.
ಮೈಶುಗರ್ ಖಾಸಗೀಕರಣ ಸೂಕ್ತ ನಿಲುವಲ್ಲ:
ಹಳೇ ಯಂತ್ರಗಳ ರಿಪೇರಿ, ಖಾಸಗೀಕರಣಕ್ಕಿಂತ ನೂತನ ಶುಗರ್ ಕಾರ್ಖಾನೆಯ ಕಾಯಕಲ್ಪ ಒಳ್ಳೆಯದು. ಹಿಂದೆ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಇದ್ದಾಗ ಹೊಸ ಕಾರ್ಖಾನೆ ಮಾಡುವ ಉದ್ದೇಶವನ್ನ ಕುಮಾರಸ್ವಾಮಿ ಹೊಂದಿದ್ದರು.ಹೆಚ್ಡಿಕೆ ಉದ್ದೇಶ, ಯಡಿಯೂರಪ್ಪರ ಮೂಲಕ ಈಡೇರಲಿ.ಮೈಶುಗರ್ ವಿಷಯದಲ್ಲಿ ರಾಜಕೀಯ ದೊಂಬರಾಟಕ್ಕಿಂತ ರೈತರ ಹಿತಾಸಕ್ತಿ ಮುಖ್ಯ ಅಂತೇಳುವ ಮೂಲಕ ಪರೋಕ್ಷವಾಗಿ ಸಂಸದೆ ಸುಮಲತಾ ಅಂಬರೀಶ್ ಗೆ ಟಾಂಗ್ ನೀಡಿದರು.
ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.