ಬೆಂಗಳೂರು : ಕೊರೋನಾ ಕಬಂಧಬಾಹುವಿಗೆ ಇಡೀ ವಿಶ್ವವೇ ತತ್ತರಿಸಿದ್ದು, ಈ ಹೆಮ್ಮಾರಿ ಅಟ್ಟಹಾಸಕ್ಕೆ ಅದೇಷ್ಟೋ ಮಂದಿ ಬಲಿಯಾಗಿದ್ದಾರೆ. ಆದ್ರೆ ಇದೀಗ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರ ಮನೆಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆಗೂ ಕೊರೋನಾ ವೈರಸ್ ಬಂದಿದೆ.. ಹೆಮ್ಮಾರಿ ಅಟ್ಟಹಾಸದಿಂದ ಭಯಭೀತರಾಗಿರುವ ಸಚಿವ ಸುಧಾಕರ್ ಇಂದು ಸಿಎಂ ನೇತೃತ್ವದಲ್ಲಿ ನಡೆದ ಸಭೆಗೆ ಗೈರಾಗಿದ್ದಾರೆ ಎಂದು ಹೇಳಲಾಗ್ತಿದೆ.. ಇನ್ನು ಅಡುಗೆ ಆಕೆಗೆ ಕೊರೋನಾ ಬಂದಿರುವುದರಿಂದ ಸುಧಾಕರ್ ಸೇರಿ ಅವರ ಮನೆಯವರನ್ನು ಸಹ ಕ್ವಾರಂಟೈನ್ ಮಾಡುವ ಸಾಧ್ಯತೆ ಇದೆ.