ದೊಡ್ಡಬಳ್ಳಾಪುರ : ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಗೌರವಯುತ ಜೀವನ ನಡೆಸುತ್ತಿದ್ದವರಿಗೆ. ಅದೇ ಶಾಲೆಯ ಹಳೇ ವಿದ್ಯಾರ್ಥಿಯ ಪರಿಚಯವಾಗಿ. ಗುರುವಿಗೆ ಸರ್ಕಾರಿ ಕೆಲಸ ಕೊಡಿಸುವ ಆಸೆ ಹುಟ್ಟಿಸಿದ. ಶಿಷ್ಯನ ಮಾತಿನ ಮೋಡಿಗೆ ಒಳಗಾದ ಗುರು ತನ್ನ ಸ್ನೇಹಿತರಿಂದು ಹಣ ಕೊಡಿಸಿದ್ರು, 65 ಜನರಿಂದ 98 ಲಕ್ಷ ಹಣ ದೋಚಿದ ಚೋರ್ ಶಿಷ್ಯ ಹಣ ಕೊಟ್ಟ ಎಲ್ಲರಿಗೂ ಪಂಗನಾಮ ಹಾಕಿದ್ದಾನೆ.
ಒಂದೆಡೇ ಶಿಷ್ಯನ ಮೋಸ ಮತ್ತೊಂದೆಡೆ ಹಣ ಕೊಟ್ಟ ಸ್ನೇಹಿತರ ಕಾಟ, ಇದರಿಂದ ಬೇಸತ್ತ ಶಿಕ್ಷಕ ಮನೆ ಬಿಟ್ಟು ಬೆಟ್ಟಗುಡ್ಡ ಅಲೆಯುತ್ತಿದ್ದಾರೆ. ಹೌದು ಹನುಮಂತಯ್ಯ ಡಿ.ಹೆಚ್, ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಹೆಜ್ಜಾಜಿ ಗ್ರಾಮದ ನಿವಾಸಿ. ಬಿಎಡ್ ವಿದ್ಯಾಭ್ಯಾಸ ಮಾಡಿರೋ ಇವರು ದೊಡ್ಡಬಳ್ಳಾಪುರ ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡ್ತಾ ಇದ್ರು, ಬರೋ ಸಂಬಳದಲ್ಲಿ ಹೆಂಡತಿ ಮಕ್ಕಳ ಜೊತೆ ನೆಮ್ಮದಿಯ ಜೀವನ ಮಾಡ್ತಾ ಇದ್ರು, ಆದರೆ ಶಿಷ್ಯನ ರೂಪದಲ್ಲಿ ಪರಿಚಯನಾದ ಹಳೇ ವಿದ್ಯಾರ್ಥಿ ಗುರುವಿನ ಜೀವನೊಂದಿಗೆ ಚೆಲ್ಲಾಟವಾಡುತ್ತಿದ್ದಾನೆ. ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ನಿವಾಸಿ ಮಹೇಶ್ ಸಿ ಶಿಕ್ಷಕ ಹನುಮಂತಯ್ಯ ಕೆಲಸ ಮಾಡುತ್ತಿದ್ದ ಶಾಲೆಯ ಹಳೇ ವಿದ್ಯಾರ್ಥಿ, 2017ರಲ್ಲಿ ತಾನು ಹಳೇ ವಿದ್ಯಾರ್ಥಿಯೆಂದು ಪರಿಚಯ ಮಾಡ್ಕೊಂಡಿದ್ದಾನೆ. ತಾನೂ ಎಂಎಸ್ ಬಿಲ್ಡಿಂಗ್ ನಲ್ಲಿ ಕೆಲಸ ಮಾಡುವುದ್ದಾಗಿ ಹೇಳಿ ಸರ್ಕಾರಿ ಕೆಲಸ ಕೊಡಿಸುವುದ್ದಾಗಿ ಹೇಳಿದ್ದಾನೆ, ಶಿಷ್ಯನ ಮಾತು ನಂಬಿದ ಹನುಮಂತಯ್ಯ ಸರ್ಕಾರಿ ಕೆಲಸದ ಅಮಿಷಕ್ಕೆ ಒಳಗಾಗಿ ತನ್ನ ಹೆಂಡತಿಗೂ ಸರ್ಕಾರಿ ಕೆಲಸ ಕೊಡಿಸುವಂತೆ ಹೇಳಿ 5 ಲಕ್ಷ ಹಣ ಕೊಟ್ಟಿದ್ರು. ಇಷ್ಟಕ್ಕೆ ಸುಮ್ಮನಾಗದ ಮಹೇಶಾ ನಿಮ್ಮ ಸ್ನೇಹಿತರಿಗೂ ಸರ್ಕಾರಿ ಕೆಲಸ ಕೊಡಿಸುವ ಆಸೆ ಹುಟ್ಟಿಸಿದ. ಶಿಷ್ಯನ ಮಾತಿನ ಮರುಳಾಗಿ ತನ್ನ ಸ್ನೇಹಿತರ ವಲಯದ 80 ಜನರ ಒಟ್ಟು 98 ಲಕ್ಷ ಹಣವನ್ನ ಕೊಡಿಸಿದ್ರು.ಅದರೀಗ ಸರ್ಕಾರಿ ಕೆಲಸನೂ ಇಲ್ಲ ಕೊಟ್ಟ ಹಣವೂ ಇಲ್ಲದಂತ್ತಾಗಿ, ಹಣ ಕೊಟ್ಟ ಸ್ನೇಹಿತರ ಕಾಟ ತಾಳಲಾರದೆ ಮನೆ ಬಿಟ್ಟು ಬೆಟ್ಟಗುಡ್ಡ ಅಲೆಯುತ್ತಿದ್ದಾರೆ.
ಸರ್ಕಾರಿ ಕೆಲಸದ ಆಸೆ ಹುಟ್ಟಿಸಿದ ಮಹೇಶ್ ತನಗೆ ಎಂಎಸ್ ಬಿಲ್ಡಿಂಗ್ ನಲ್ಲಿ ಅಧಿಕಾರಿಗಳಾದ ನಾಗರಾಜ್ ಕೆ, ಮೋಹನ್ ಹೆಸರೆಳ್ಕೊಂಡ್ ನಕಲಿ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸಿದ, ಎಸ್ ಎಸ್ ಎಲ್ ಸಿ ಪಾಸದವರಿಗೆ 50 ಸಾವಿರ, ಪಿಯುಸಿ ಪಾಸದವರಿಗೆ 1 ಲಕ್ಷ, ಡಿಗ್ರಿ ಪಾಸಾದವರಿಗೆ 2 ಲಕ್ಷಕ್ಕೆ ಸರ್ಕಾರಿ ಕೆಲಸದ ಅಮಿಷ ತೊರಿಸಿ ಸುಮಾರು 98 ಲಕ್ಷ ಹಣವನ್ನು ತೆಗೆದು ಕೊಂಡಿದ್ದಾನೆ. ಹಣ ತಗೊಂಡ ಮಹೇಶ ತನ್ನ ಅಣ್ಣ ಜಯಶಂಕರ, ಭಾವ ಮಂಜುನಾಥ್ , ಸ್ನೇಹಿತ ಶಶಿಕುಮಾರ್ ಮತ್ತು ಮಾರ್ವಾಡಿಯೊಬ್ಬರ ಜೊತೆ ಸೇರಿದ್ದಾನೆ, ಮಹೇಶನ ತಲೆ ಕೆಡಿಸಿದ ಇವರು ಹಣವನ್ನ ತಗೊಂಡು ಫೈನಾನ್ಸ್ , ಜಮೀನು ಖರೀದಿ, ಮತ್ತು ತೋಟದಲ್ಲಿ ಬೋರ್ ವೇಲ್ ಕೊರೆಸಿದ್ದಾರೆ. ಇಧಕ್ಕೆ ಸಂಬಂಧಪಟ್ಟಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಮಹೇಶನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ, ಸದ್ಯ ಬೇಲ್ ತಗೊಂಡು ಹೊರಗೆ ಬಂದಿರುವು ಮಹೇಶ ಹಣ ಕೊಡದೆ ಸತಾಯಿಸುತ್ತಿದ್ದಾನೆ. ಅಲ್ಲದೆ ಮಹೇಶನಾ ಸಂಬಂಧಿಕರು ಶಿಕ್ಷಕ ಹನುಮಂತಯ್ಯನವರಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಭಯಗೊಂಡು ಬೆಟ್ಟಗುಡ್ಡದಲ್ಲಿ ತಲೆಮರೆಸಿಕೊಂಡು ಓಡಾಡುವಂತ್ತಾಗಿದೆ.
ಇನ್ನೂ ಹನುಮಂತಯ್ಯರವರ ಪತ್ನಿ ಅಶ್ವಿನಿ ಘಟನೆಯಾದ ದಿನದಂದಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. 98 ಲಕ್ಷ ಮೈ ಮೇಲೆ ಎಳೆದುಕೊಂಡಿರುವ ಗಂಡ ಯಾವಾಗ ಏನು ಮಾಡಿಕೊಳ್ತಾರೊ ಅನ್ನೋ ಭಯ ಅವರನ್ನು ಕಾಡುತ್ತಿದೆ. ಇನ್ನೂ ಮನೆಯ ಬಳಿ ಬರುವ ಸ್ನೇಹಿತರು ಹಣ ಕೊಡುವಂತೆ ಕಾಡುತ್ತಿದ್ದಾರೆ, ಮೂರು ತಿಂಗಳಿಂದ ಊಟ ನಿದ್ದೆ ಇಲ್ಲದೆ ಗಂಡನ ಸ್ಥಿತಿ ಕಂಡು ಕಣ್ಣಿರಿಡುತ್ತಿದ್ದಾರೆ.
ಪೊಲೀಸ್ ಠಾಣೆಯಲ್ಲಿ ತನ್ನ ತಪ್ಪು ಒಪ್ಪಿಕೊಂಡಿರುವ ಮಹೇಶ ಹಣ ಕೊಡುವುದ್ದಾಗಿ ಹೇಳಿದ್ದಾನೆ,ಆದರೆ ಅವನ ತಲೆ ಕೆಡಿಸಿರುವ ಅವನ ಸಂಬಂಧಿಗಳು ಹಣ ತಗೊಂಡು ಮಜಾ ಮಾಡುತ್ತಿದ್ದಾರೆ, ಇನ್ನೂ ಪ್ರಕರಣ ದಾಖಲಾಗಿ 6 ತಿಂಗಳ್ಳಾದ್ರು ಯಾವುದೇ ಪ್ರಗತಿಯಾಗಿಲ್ಲ, ಅಂತಿಮವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಮೇಲೆ ಅಪಾರ ನಿರೀಕ್ಷೆ ಇಟ್ಟಿಕೊಂಡಿರುವ ಹನುಮಂತಯ್ಯ ಕುಟುಂಬ ಅವರನ್ನು ಭೇಟಿ ಮಾಡಿ ತಮ್ಮ ನೋವು ತೊಡಿಕೊಳ್ಳಲಿದ್ದಾರೆ.
ರಾಮಾಂಜಿ.ಎಂ ಬೂದಿಗೆರೆ ಪವರ್ ಟಿವಿ ದೇವನಹಳ್ಳಿ