ಚಿತ್ರದುರ್ಗ : ಕೊರೊನಾ ಅಂದ್ರೆ ಸಾಕು ಜನ ಬೆಚ್ಚಿ ಬೀಳ್ತಾರೆ, ಸೋಂಕು ಇರುವವರ ಮನೆ ಏರಿಯಾಗಳನ್ನೇ ಸೀಲ್ ಡೌನ್ ಮಾಡ್ತಾರೆ, ಆದ್ರೆ ಚಿತ್ರದುರ್ಗದ ಜನರಿಗೆ ಮಾತ್ರ ಕೊರೊನಾ ಅಂದ್ರೆ ಭಯವೇ ಇಲ್ವಂತೆ, ಜಿಲ್ಲೆಯಲ್ಲಿ 43 ಜನ ಕೊರೊನಾ ಸೋಂಕಿತರು ಈಗಾಗಲೇ ಗುಣಮುಖರಾಗಿ ಬಿಡುಗಡೆ ಆಗಿರೋದ್ರಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆ ಬಳಿ ತೆರೆಯಲಾಗಿದ್ದ ಹೊಸ ಕೋವಿಡ್19 ಆಸ್ಪತ್ರೆ ಈಗ ಖಾಲಿಯಾಗಿದೆ, ಹೀಗಾಗಿ ಕೋವಿಡ್ ಆಸ್ಪತ್ರೆ ಹೇಗಿರುತ್ತೆ ಅನ್ನೋ ಕುತೋಹಲದಿಂದ ಜನರು ಆಸ್ಪತ್ರೆ ಬಳಿ ಹೋಗಿ ಸೆಲ್ಫೀ ತೆಗೆದುಕೊಳ್ಳೋದು, ಒಳಗಡೆ ಹೋಗೋದು ಮಾಡ್ತಾರಂತೆ. ಇದರಿಂದ ಎಚ್ಚೆತ್ತ ಜಿಲ್ಲಾ ವೈದ್ಯಾಧಿಕಾರಿಗಳು ಈಗ ಕೋವಿಡ್ ಆಸ್ಪತ್ರೆಯನ್ನೇ ಸೀಲ್ ಡೌನ್ ಮಾಡಿದ್ದೇವೆ ಅಂತ ಡಿ.ಎಚ್.ಒ ಪಾಲಾಕ್ಷ್ಯ ತಿಳಿಸಿದ್ದಾರೆ.