Wednesday, January 22, 2025

ಎಂಎಲ್​ಸಿ ಸ್ಥಾನಕ್ಕೆ ಮೂವರ ಹೆಸರು ಫೈನಲ್ : ಎಸ್.ಟಿ ಸೋಮಶೇಖರ್

ಮೈಸೂರು: ಎಂಎಲ್​ಸಿ ಸ್ಥಾನಕ್ಕೆ ಬಿಜೆಪಿ ಕೋರ್ ಕಮಿಟಿಯಲ್ಲಿ ಹೆಸರು ಅಂತಿಮಗೊಳಿಸಿದ್ದು, ಹೆಚ್. ವಿಶ್ವನಾಥ್, ಎಂಟಿಬಿ ನಾಗರಾಜ್, ಆರ್​. ಶಂಕರ್ ಶಿಫಾರಸ್ಸು ಮಾಡಲಾಗಿದೆ ಎಂದು ಎಸ್​.ಟಿ ಸೋಮಶೇಖರ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ‘ಬಿಜೆಪಿ ಕೋರ್ ಕಮಿಟಿಯಲ್ಲಿ ಮೂವರ ಹೆಸರು ಫೈನಲ್ ಆಗಿದ್ದು, ಕಮಿಟಿಯಲ್ಲಿ ನಿರ್ಧರಿಸಿದ ಹೆಸರಿನ ಪಟ್ಟಿಯನ್ನು ಹೈಕಮಾಂಡ್​ಗೆ ಕಳುಹಿಸಲಾಗಿದೆ. ಹಾಗಾಗಿ ಸಂಜೆ ವೇಳೆಗೆ ಅಧಿಕೃತ ಮಾಹಿತಿ ದೊರೆಯುತ್ತದೆ. ಈ ಮೂವರು ರಾಜೀನಾಮೆ ನೀಡಿರುವುದಕ್ಕೆ ಈ ಸರ್ಕಾರ ಬಂದಿರುವುದು. ಸಿಎಂ ಕೊಟ್ಟ ಭರವಸೆ ಏನು ಎಂಬುದು ನಮಗೂ ಗೊತ್ತು. ಹಾಗೆಯೇ ಅವರಿಗೂ ತಿಳಿದಿದೆ‘ ಎಂದರು. 

RELATED ARTICLES

Related Articles

TRENDING ARTICLES