ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣಕ್ಕೆ ಒಂದಿಲ್ಲ ಒಂದು ತಡೆ ಆಗುತ್ತಲೇ ಇದೆ. ಡಿ.ಕೆ.ಶಿ.ಪಟ್ಟ ಅಲಂಕರಿಸಬೇಕು ಅನ್ನೋದು ಅಭಿಮಾನಿಗಳ ಆಸೆ.ಆದ್ರೆ ಪ್ರತಿಜ್ಞಾ ವಿಧಿ ಸ್ವೀಕರಿಸಲು ಸಾಧ್ಯವೇ ಆಗುತ್ತಿಲ್ಲ. ಪದಗ್ರಹಣ ಸುಸೂತ್ರವಾಗಿ ನೇರವೇರಲೆಂದು ಅಭಿಮಾನಿಗಳು ನಂಜುಂಡನ ಮೊರೆ ಹೋಗಿದ್ದಾರೆ. ನಂಜುಂಡನ ಸನ್ನಿಧಿಯಲ್ಲಿ ಡಿ ಕೆ ಶಿವಕುಮಾರ್ ಅಭಿಮಾನಿ ಕುಮಾರ್ ಎಂಬಾತ ಉರುಳು ಸೇವೆ ಮಾಡಿ ಪ್ರಾರ್ಥಿಸಿದ್ದಾನೆ.
ಇಂದು ಬೆಳಿಗ್ಗೆ ಕಪಿಲಾ ನದಿಯಲ್ಲಿ ಮಿಂದು ವಿಶಕಂಠನ ಸನ್ನಿದಿಯಲ್ಲಿ ಉರುಳು ಸೇವೆ ಮಾಡಿ ಯಾವುದೇ ಅಡಚಣೆ ಆಗದೇ ಅಧಿಕಾರ ಸ್ವೀಕಾರ ಕಾರ್ಯ ನೇರವೇರಲೆಂದು ನಂಜುಂಡನ ಬಳಿ ಪ್ರಾರ್ಥನೆ ಸಲ್ಲಿಸಲಾಗಿದೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪದಗ್ರಹಣಕ್ಕೆ ಕೊರೊನಾ ಅಡ್ಡಿಯಾಗುತ್ತಿದೆ. ಕಾರ್ಯಕ್ರಮಕ್ಕೆ ಸರ್ಕಾರವೂ ಅನುಮತಿ ನೀಡಲು ವಿಳಂಬ ಮಾಡಿದೆ .ಇದೆಲ್ಲಾದರ ಹಿನ್ನಲೆ ಉರುಳು ಸೇವೆ ಮಾಡಿ ನಂಜುಂಡನಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ.