ಬೆಂಗಳೂರು : ಕೃಷ್ಣಲೀಲಾ, ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆಯನ್ನ ಮೂಡಿಸಿದ್ದ ಮಯೂರಿ ಇಂದು ಹಸೆಮಣೆ ಏರಿದ್ದಾರೆ.
ಸದ್ಯ ಸ್ಯಾಂಡಲ್ ವುಡ್ ನ ಗ್ಲಾಮರ್ ಕ್ಯೀನ್ ಮಯೂರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನಲೆ ಮಯೂರಿ ಸರಳವಾಗಿ ಹಸೆಮಣೆ ಏರಿದ್ದಾರೆ., ಮದುವೆಯ ಸುದ್ದಿಯನ್ನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಇತ್ತೀಚಿಗೆ ಮಯೂರಿ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಆದರೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಮಯೂರಿ ಮತ್ತು ಅರುಣ್ ಮದುವೆ ಬೆಂಗಳೂರಿನ ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನೆರವೇರಿದೆ. ತೀರ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು.
ಮಯೂರಿ ಮತ್ತು ಅರುಣ್ ಅವರದ್ದು 10 ವರ್ಷದ ಪ್ರೀತಿ. ಸುಮಾರು 10 ವರ್ಷಗಳಿಂದ ಪ್ರೀತಿಸುತ್ತಿದ್ದ ಮಯೂರಿ ಮತ್ತು ಅರುಣ್ ಮನೆಯವರ ಒಪ್ಪಿಗೆ ಪಡೆದು, ಕುಟುಂಬದವರ ಸಮ್ಮುಖದಲ್ಲಿ ಸಂಪ್ರದಾಯಬದ್ದವಾಗಿ ಹೊಸ ಜೀವನಕ್ಕೆ ಕಾಲಿಟ್ಟರು