ಚೆನ್ನೈ : ಕೊರೋನಾ ಸೋಂಕಿಗೆ ತಮಿಳುನಾಡಿನ ಡಿಎಂಕೆ ಶಾಸಕ ಜೆ ಅನ್ಬಳಹನ್ ಬಲಿಯಾಗಿದ್ದಾರೆ. ಇತ್ತೀಚೆಗೆ ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು, 62 ವರ್ಷದ ಡಿಎಂಕೆ ಶಾಸಕ ಜೆ ಅನ್ಬಳಗನ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಉಸಿರಾಟದ ಪ್ರಮಾಣ ಅರ್ಧಕ್ಕೆ ಇಳಿದಿತ್ತು ಎಂದು ನಿನ್ನೆ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.
ನಂತರವೂ ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿರಲಿಲ್ಲ. ಅವರಿಗೆ ಹೃದ್ರೋಗ, ರಕ್ತದೊತ್ತಡ, ಕಿಡ್ನಿ ಸಮಸ್ಯೆ ಕೂಡ ಇದ್ದಿತ್ತು. ಎಲ್ಲವೂ ಒಟ್ಟು ಸೇರಿ ಕೊರೋನಾ ಸೋಂಕು ತಗಲಿದ ನಂತರ ಗಂಭೀರವಾಗಿ ಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೃತಪಟ್ಟಿದ್ದಾರೆ.