ಬೆಂಗಳೂರು : ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ SSLC ಪರೀಕ್ಷೆ ನಡೆಸಲು ಮುಂದಾಗಿದ್ದು ಪೋಷಕರು ಇದಕ್ಕೆ ವಿರೋದ್ಧ ವ್ಯಕ್ತಪಡಿಸುತ್ತಿದ್ದಾರೆ.
ನಿನ್ನೆ ಮಾದ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ SSLC ಪರೀಕ್ಷೆ ಎಲ್ಲಾ ಮುಂಜಾಗ್ರತ ಕ್ರಮಗಳೊಂದಿಗೆ ಮಾಡುತ್ತೇವೆ ಎಂದು ಹೇಳಿದ್ದಾರೆ, ಆದ್ರೆವಿದ್ಯಾರ್ಥಿಗಳ ಸುರಕ್ಷತಾ ಕ್ರಮಕ್ಕೆ ಸರ್ಕಾರ ಯಾವ ರೀತಿಯ ಸಿದ್ಧತೆಯನ್ನು ಮಾಡಿಲ್ಲ. ಪರೀಕ್ಷಾ ಕೊಠಡಿಯಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡುತ್ತಾರೋ ಇಲ್ಲವೋ ಅದು ಕೂಡ ಇನ್ನು ತಿಳಿಸಿಲ್ಲ. ಪ್ರಶ್ನೆ ಮತ್ತು ಉತ್ತರ ಪತ್ರಿಕೆ ವಿತರಣೆ ಮಾಡುವಾಗ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ ಅನ್ನುವುದರ ಬಗ್ಗೆಯೂ ಮಾಹಿತಿ ಇಲ್ಲ. ಇಂತಹ ಹತ್ತಾರು ಗೊಂದಲದ ಮಧ್ಯೆ ಪರೀಕ್ಷೆ ನಡೆಸಲು ಪರೀಕ್ಷಾ ಮಂಡಳಿ ಸಿದ್ಧತೆ ಮಾಡುತ್ತಿರುವುದಕ್ಕೆ ಪೊಷಕರು ವಿರೋಧ ವ್ಯಕ್ತ ಪಡಿಸುತ್ತಿದ್ಧಾರೆ.
ಇಷ್ಟೆಲ್ಲ ಗೊಂದಲದ ಮದ್ಯೆ ಪರೀಕ್ಷೆ ನಡೆದರು ನಡೆಯಬಹುದು ಗೊಂದಲ ಬಿಟ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜಾಗೋದು ಒಳಿತು