ಬೆಂಗಳೂರು : ಮೊನ್ನೆ ಹೃದಾಯಾಘಾತದಿಂದ ಸಾವನ್ನಪ್ಪಿದ ಸ್ಯಾಮಡಲ್ ವುಡ್ ನಟ ಚಿರು ಸರ್ಜಾರವರ ಹಾಲು ತುಪ್ಪದ ಕಾರ್ಯವನ್ನು ಇಂದು ಮಾಡಲಾಯಿತು. ಕನಕಪುರದ ಬಳಿಯಿರುವ ಬೃಂದಾವನ ಫಾರ್ಮ್ ಹೌಸ್ ನಲ್ಲಿ ನಿನ್ನೆ ಅಂತ್ಯಕ್ರಿಯೆ ಮಡಲಾಗಿತ್ತು, ಚಿರು ಸಾವನ್ನಪ್ಪಿ ಇಂದಿಗೆ 3 ದಿನ ಆಗಿರುವುದರಿಂದ ಅವರ ಸಂಪ್ರದಾಯದಂತೆ ಇಂದು ಕುಟುಂಬಸ್ಥರ ಸಮ್ಮುಖದಲ್ಲಿ ಹಾಲು ತುಪ್ಪ ಬಿಡುವ ಕಾರ್ಯ ನೆರೆವೇರಿಸಲಾಯಿತು.