ದೆಹಲಿ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಆರೋಗ್ಯ ಸಮಸ್ಸೆ ಕಾಣಿಸಿಕೊಂಡಿರುವುದರಿಂದ ನಾಳೆ ಕೊರೊನಾ ಟೆಸ್ಟ್ ಗೆ ಒಳಗಾಗಲಿದ್ದಾರೆ.
ಕೇಜ್ರಿವಾಲ್ ಗೆ ಸಣ್ಣ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡಿರುವುದರಿಂದ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಸಿಎಂ ತಮ್ಮ ಎಲ್ಲಾ ಮೀಟಿಂಗ್ ಕ್ಯಾನ್ಸ್ಲ್ ಮಾಡಿದ್ದಾರೆ. ಭಾನುವಾರದಿಂದ ಇಲ್ಲಿಯವರೆಗೂ ಕೇಜ್ರಿವಾಲ್ ಯಾರನ್ನು ಭೇಟಿ ಮಾಡಿಲ್ಲ. ಸದ್ಯ ಕೇಜ್ರಿವಾಲ್ ಗೆ 51 ವರ್ಷ ವಯಸ್ಸಾಗಿದ್ದು ಆರೋಗ್ಯದ ದೃಷ್ಠಿಯಿಂದ ಟೆಸ್ಟ್ ಗೆ ಮುಂದಾಗಿದ್ಧಾರೆ.