ಬೆಂಗಳೂರು : ಕಳೆದ ಎರಡು ತಿಂಗಳಿಂದ ಕ್ಲೋಸ್ ಆಗಿದ್ದ ದೇವಸ್ಥಾನ, ಮಸೀದಿ, ಪ್ರಾರ್ಥನಾ ಮಂದಿರಗಳನ್ನು ಜೂನ್ 8ರಿಂದ ಓಪನ್ ಮಾಡುಲು ಕೇಂದ್ರ ಸರ್ಕಾರ ಆದೇಶ ನೀಡಿದೆ. ಇದೇ ಹಿನ್ನಲೆ ದೇಶದಾದ್ಯಂತ ಪ್ರಾರ್ಥನಾ ಮಂದಿರಗಳು ನಾಳೆಯಿಂದ ಓಪನ್ ಆಗುತ್ತಿದ್ದು ಎಂಟ್ರಿ ನೀಡೋರಿಗೆ ಹೊಸ ರೂಲ್ಸ್ ಜಾರಿ ಮಾಡಲಾಗಿದೆ.
ನಾಳೆಯಿಂದ ದೇವಸ್ಥಾನಗಳಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಲೇ ಬೇಕು, ದೇವಸ್ಥಾನದ ಒಳಗೆ ಪ್ರವೇಶಿಸುವಾಗ ಸ್ಯಾನಿಟೈಸರ್ ಬಳಸಬೇಕು, ಇನ್ನು ಯಾರು ಕೂಡ ದೇವಸ್ಥಾನದಲ್ಲಿ ಪಕ್ಕ ನಿಂತು ಪ್ರಾರ್ಥನೆ ಸಲ್ಲಿಸುವಂತಿಲ್ಲ, ಕಂಟೈನ್ ಮೆಂಟ್ ಝೋನ್ ಗಳಲ್ಲಿ ಸದ್ಯಕ್ಕೆ ಪ್ರಾರ್ಥನಾ ಮಂದಿರಗಳನ್ನು ತೆರೆಯದಿರಲು ಸೂಚಿಸಲಾಗಿದೆ. ಇನ್ನು ಮಸೀದಿಗಳಲ್ಲಿ ಯಾರು ಕೂಡ ಒಬ್ಬರಿಗೊಬ್ಬರು ಆತ್ಮೀಯವಾಗಿ ವಿಶ್ ಮಾಡುವಂತಿಲ್ಲ, ಇದೆಲ್ಲದನ್ನು ಪಾಲಿಸುವವರಿಗೆ ಮಾತ್ರ ದೇವಸ್ಥಾನಕ್ಕೆ ಎಂಟ್ರಿ ನೀಡಲು ಅನುಮತಿ ಕೊಡಲಾಗುತ್ತದೆ, ಆದ್ರೆ ಇದೆಲ್ಲದರ ಮದ್ಯೆ ಚಿಕ್ಕ ಮಕ್ಕಳಿಗೆ ಹಾಗೆಯೇ , ವಯಸ್ಸಾದವರಿಗೆ ಪ್ರಾರ್ಥನಾ ಮಂದಿರಗಲಿಗೆ ಎಂಟ್ರಿ ಇಲ್ಲವಾದರು ಅವರನ್ನ ಹೇಗೆ ತಡೆಯುತ್ತಾರೆ ಅನ್ನೊದೆ ದೊಡ್ಡ ಪ್ರಶ್ನೆ.