ಶೃಂಗೇರಿ : ಇತ್ತೀಚೆಗೆ ನಮ್ಮ ಜನರು ಅಂಗಡಿಗೆ ಹೋಗಿ ಕರೀದಿ ಮಾಡೋದಕ್ಕಿಂತಾ, ಆನ್ ಲೈನ್ ಮೂಲಕ ಕರೀದಿ ಮಾಡೋದೆ ಜಾಸ್ತಿ. ಇಲ್ಲೊಬ್ಬರು ಆನ್ ಲೈನ್ ಮೂಲಕ ಕರೀದಿಮಾಡೋಕೆ ಹೋಗಿ ಯಾಮಾರಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ.
ಕೆಲದಿನಗಳಹಿಂದೆ ಶೃಂಗೇರಿ ಮೂಲದ ಹೈದರಾಲಿ ಅನ್ನೊ ವ್ಯಕ್ತಿಯೊಬ್ಬರು ಅಮೇಜಾನ್ ನಲ್ಲಿ 15000 ರೂ. ಕೊಟ್ಟು ಮೊಬೈಲ್ ಆರ್ಡರ್ ಮಾಡಿದ್ದರು. ಮನೆಗೆ ಕೊರಿಯರ್ ಬಂದಾಗ ಇನ್ನೇನೂ ಹೊಸ ಫೋನ್ ಕೈಗೆ ಬಂತು ಅಂತಾ ಖುಷಿಯಲ್ಲಿದ್ದರು. ಆದ್ರೆ ಕವರ್ ಒಪನ್ ಮಾಡಿದಾಗ ಸಿಕ್ಕಿದ್ದು ಆಲೂಗಡ್ಡೆ, ವಿಮ್ ಸೋಪ್ ಇನ್ನು, ಈ ಫೋನ್ ಗೆ ಮೊದಲೆ ಕಣಕಟ್ಟಿದ್ದ ಹೈದರ್ ಅಮೇಜಾನ್ ನಲ್ಲಿ ನಡೆದ ಈ ಮೋಸದ ವಿರುದ್ದ ಕಿಡಿ ಕಾರಿದ್ದಾರೆ.