Sunday, January 12, 2025

ಸ್ಟ್ರಾಬೆರಿ ಚಂದ್ರಗ್ರಹಣ : ಇಂದಿನ ವಿಶೇಷ ಚಂದ್ರಗ್ರಹಣ ಎಲ್ಲೆಲ್ಲಿ ಗೋಚರ?

ನವದೆಹಲಿ: ಇಂದು ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸಲಿದೆ. ಈ ಬಾರಿಯ ಚಂದ್ರಗ್ರಹಣ ತುಂಬಾ ವಿಶೇಷವಾಗಿದ್ದು, ಚಂದ್ರ ಇಂದು ಸ್ಟ್ರಾಬೆರಿ ಬಣ್ಣದಲ್ಲಿ ಕಾಣಿಸಲಿದ್ದಾನೆ.

ಇಂದಿನ ಗ್ರಹಣ ಸಂಪೂರ್ಣವಾಗಿಲ್ಲದೆ, ಅರೆ ನೆರಳಿನ ಚಂದ್ರಗ್ರಹಣವಾಗಲಿದೆ. ಪೂರ್ಣ ಚಂದ್ರಗ್ರಹಣದಲ್ಲಿ ಚಂದ್ರ ಹಾಗೂ ಸೂರ್ಯನ  ನಡುವೆ ಭೂಮಿಬರುತ್ತದೆ. ಆದರೆ ಇಂದು ಸಂಭವಿಸುವ ಚಂದ್ರಗ್ರಹಣ ವಿಶೇಷವಾಗಿದ್ದು, ಸೂರ್ಯನ ಬೆಳಕು ಭೂಮಿಯ ಮೇಲೆ ಬಿದ್ದು, ಭೂಮಿಯ ಹಿಂದೆ ನೆರಳು ಉಂಟಾಗುತ್ತದೆ. ಆ ನೆರಳನ್ನು ಚಂದ್ರ ಹಾದು ಹೋಗುವುದರಿಂದ ಚಂದ್ರ ಇಂದು ಸ್ಟ್ರಾಬೆರಿ ಬಣ್ಣದಲ್ಲಿ ಕಾಣಿಸಿಕೊಳ್ಳಲಿದ್ದು, ಅರೆ ನೆರಳಿನ ಚಂದ್ರಗ್ರಹಣ ಸಂಭವಿಸುತ್ತದೆ.

ಇನ್ನು ಚಂದ್ರಗ್ರಹಣ ರಾತ್ರಿ 11.16 ಕ್ಕೆ ಪ್ರಾರಂಭವಾಗಲಿದ್ದು, 2.30 ಕ್ಕೆ ಅಂತ್ಯವಾಗಲಿದೆ. ಮಧ್ಯರಾತ್ರಿ 12.45 ಕ್ಕೆ ಪೂರ್ಣ ಗ್ರಹಣ ಗೋಚರವಾಗಲಿದೆ. ಇಂದು ಭಾರತ ಸೇರಿದಂತೆ ಏಷ್ಯಾದ ಕೆಲವು ಭಾಗಗಳಲ್ಲಿ ಚಂದ್ರಗ್ರಹಣ ಗೋಚರವಾಗಲಿದ್ದು, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ, ಯುರೋಪ್, ಆಫ್ರಿಕಾ ಗೋಚರಿಸುತ್ತದೆ. 

RELATED ARTICLES

Related Articles

TRENDING ARTICLES