Sunday, January 12, 2025

ಅಪ್ಪು ಬರ್ತ್​ಡೇ ಸೆಲೆಬ್ರೇಷನ್​​ಗೂ ತಟ್ಟಲಿದ್ಯಾ ಕೊರೋನಾ?

ಕೊರೋನಾ ಭೀತಿ ಹಿನ್ನೆಲೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಬರ್ತ್​ಡೇ ಸೆಲೆಬ್ರೇಷನ್ ಕ್ಯಾನ್ಸಲ್ ಮಾಡಿರುವುದಾಗಿ ತಿಳಿದು ಬಂದಿದೆ.

ಇದೇ ಮಾರ್ಚ್ 17 ರಂದು ಪುನೀತ್ ರಾಜ್​ಕುಮಾರ್ 45ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಪ್ಪು ಬರ್ತ್​ಡೇ ಅಂದ್ರೆ ಅಭಿಮಾನಿಗಳಿಗೆ ಹಬ್ಬ. ಪ್ರತಿ ವರ್ಷದಂತೆ ಈ ಬಾರಿಯೂ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಡೆಡ್ಲಿ ಕೊರೋನಾ ವೈರಸ್ ಇರುವುದರಿಂದ ಸೆಲೆಬ್ರೇಷನ್ ನಡೆಯುವುದೇ ಡೌಟ್ ಅಂತ ಹೇಳಲಾಗ್ತಿದೆ. ಹುಟ್ಟುಹಬ್ಬಕ್ಕೆ ಸಾವಿರಾರು ಜನ ಅಭಿಮಾನಿಗಳು ಬರುವುದರಿಂದ ಜನಸಂದಣಿಯಾಗುತ್ತದೆ. ಇದರಿಂದ ಸಮಸ್ಯೆಗಳಾಗುತ್ತದೆ. ಹಾಗಾಗಿ ಈ ಬಾರಿ ಪುನೀತ್ ರಾಜ್​ಕುಮಾರ್ ತಮ್ಮ ಹುಟ್ಟುಹಬ್ಬವನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಳವಾಗಿ ಕುಟುಂಬದೊಂದಿಗೆ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

RELATED ARTICLES

Related Articles

TRENDING ARTICLES