Saturday, December 28, 2024

ಪ್ರೇಮಿಗಳ ದಿನಕ್ಕೆ RCB ಅಭಿಮಾನಿಗಳಿಗೆ ಬಿಗ್​ ಸರ್​ಪ್ರೈಸ್​..!

ಬೆಂಗಳೂರು : ಇಂಡಿಯನ್ ಪ್ರೀಮಿಯರ್​ ಲೀಗ್ (ಐಪಿಎಲ್​) 2020ಗೆ ದಿನಗಣನೆ ಶುರುವಾಗಿದೆ. ಮಾರ್ಚ್ 29ರಿಂದ ಐಪಿಎಲ್ ಹಂಗಾಮ ಶುರು. ಈ ನಡುವೆ ಪ್ರೇಮಿಗಳ ದಿನವಾದ ಇಂದು ಆರ್ ಸಿ ಬಿ ತನ್ನ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದೆ. ವಿಶ್ವದಾದ್ಯಂತ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಖುಷಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕ್ರಿಕೆಟ್​ ಪ್ರೇಮಿಗಳಿಗೆ ಭರ್ಜರಿ ಗಿಫ್ಟೊಂದನ್ನು ನೀಡಿದೆ.  ಹೌದು, ಘಟಾನುಘಟಿ ಆಟಗಾರರನ್ನು ಒಳಗೊಂಡಿರುವ ಪ್ರಬಲ ತಂಡವಾಗಿದ್ದರೂ ಕಳೆದ 12 ಸೀಸನ್​​ಗಳಿಂದಲೂ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಎಡವಿರುವ ವಿರಾಟ್ ಕೊಹ್ಲಿ ಪಡೆ, ಈ ಬಾರಿ ಪ್ರಶಸ್ತಿಗೆ ಮುತ್ತಿಕ್ಕಲೇ ಬೇಕೆಂಬ ಹಠದಲ್ಲಿದೆ. ಅಭಿಮಾನಿಗಳು ಕೂಡ ಬೆಟ್ಟದಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಈ ವರ್ಷ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯುತ್ತಿರುವ ತಂಡ ಇಂದು ಹೊಸ ಲೋಗೋವನ್ನು ಲೋಕಾರ್ಪಣೆ ಮಾಡಿದೆ. 
ಕಳೆದ ಸೀಸನ್​​ನಲ್ಲಿ ತಂಡದ ಹೆಸರಿಂದ ಬೆಂಗಳೂರು ಎಂಬ ಪದ ತೆಗೆದು ಹಾಕಿದ್ದರು. ಇದೀಗ ರಾಯಲ್​ ಚಾಲೆಂಜರ್ಸ್ ಜೊತೆ ಬೆಂಗಳೂರು ಎಂಬ ಪದವನ್ನು ಮತ್ತೆ ಸೇರಿಸಲಾಗಿದೆ.

RCBಯಲ್ಲಿ ಬದಲಾವಣೆ? ಈ ಬಗ್ಗೆ ಕ್ಯಾಪ್ಟನ್ ಕೊಹ್ಲಿಗೂ ಗೊತ್ತಿಲ್ಲ..!

RELATED ARTICLES

Related Articles

TRENDING ARTICLES