Saturday, January 18, 2025

RCBಯಲ್ಲಿ ಬದಲಾವಣೆ? ಈ ಬಗ್ಗೆ ಕ್ಯಾಪ್ಟನ್ ಕೊಹ್ಲಿಗೂ ಗೊತ್ತಿಲ್ಲ..!

ಇಂಡಿಯನ್ ಪ್ರೀಮಿಯರ್ ಲೀಗ್​​ (IPL) 2020ಗೆ ದಿನಗಣನೆ ಶುರುವಾಗಿದೆ. ಮಾರ್ಚ್​​ 29ರಿಂದ ಐಪಿಎಲ್​ ಹಬ್ಬ. ಕಳೆದ 12 ಸೀಸನ್​ಗಳಿಂದಲೂ ನಮ್ಮ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಚಾಂಪಿಯನ್ ಆಗುತ್ತೆ ಅಂತ ಅಭಿಮಾನಿಗಳು ಕಾದಿದ್ದಾರೆ. ಆದರೆ ಆರ್ ಸಿ ಬಿ ಮಾತ್ರ ಒಮ್ಮೆಯೂ ಟ್ರೋಫಿಗೆ ಮುತ್ತಿಕ್ಕದೆ ನಿರಾಸೆ ಮೂಡಿಸಿದೆ. ಈ ನಡುವೆ ಈ ಬಾರಿ ಹೊಸ ಹುರುಪಿನೊಂದಿಗೆ ನಮ್ಮ ಆರ್ ಸಿ ಬಿ ಕಣಕ್ಕಿಳಿಯಲು ರೆಡಿಯಾಗಿದೆ. ಈ ನಡುವೆ ಬದಲಾವಣೆ ಸುದ್ದಿಯೂ ಹಬ್ಬಿದೆ..! ವಿಶೇಷ ಅಂದ್ರೆ ಈ ಬದಲಾವಣೆ ಬಗ್ಗೆ ಸ್ವತಃ ನಾಯಕ ವಿರಾಟ್​ ಕೊಹ್ಲಿಗೂ ಗೊತ್ತಿಲ್ಲ.
ಈ ಸೀಸನ್​ನಲ್ಲಿ ಆರ್ ಸಿ ಬಿ ಹೆಸರು ಮತ್ತು ಲೋಗೋವನ್ನು ಬದಲಾಯಿಸಿಕೊಂಡು ಫೀಲ್ಡಿಗಿಳಿಯುತ್ತದೆ ಎಂದು ಹೇಳಲಾಗಿದೆ. ಈ ಬಗ್ಗೆ ತಂಡದ ಮುಖ್ಯಸ್ಥರು ಅಧಿಕೃತವಾಗಿ ಹೇಳದಿದ್ದರೂ ಫೇಸ್​ ಬುಕ್ ಹಾಗೂ ಇನ್ಸ್ಟಾಗ್ರಾಮ್​ ಕವರ್​ ಪೇಜ್​ ಇಮೇಜ್​ಗಳನ್ನು ರಿಮ್ಯೂ ಮಾಡಲಾಗಿದ್ದು, ಹೆಸರು ಮತ್ತು ಲೋಗೋ ಬದಲಾವಣೆಯ ಸುಳಿವು ಸಿಕ್ಕಂತಿದೆ. ರಾಯಲ್​ ಚಾಲೆಂಜರ್ಸ್ ಬೆಂಗಳೂರ್​ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತ ಬದಲಾಯಿಸಲಾಗುತ್ತೆ ಎನ್ನಲಾಗಿದ್ದು, ಫೆಬ್ರವರಿ 16ರಂದು ಅಧಿಕೃತ ಮಾಹಿತಿ ಹೊರಬೀಳಲಿದೆ ಅಂತ ವರದಿಯಾಗಿದೆ.
ಈ ಬಗ್ಗೆ ವಿರಾಟ್ ಕೊಹ್ಲಿ ” ತಂಡದ ಸೋಶಿಯಲ್ ಮೀಡಿಯಾ ಪೋಸ್ಟ್​ಗಳೇ ಕಾಣ್ತಿಲ್ಲ. ಇದು ಕ್ಯಾಪ್ಟನ್ ಗಮನಕ್ಕೆ ಬಂದಿಲ್ಲ. ನಿಮ್ಗೆ ಯಾವ್ದೇ ರೀತಿ ಸಹಾಯ ಬೇಕಂತಾದ್ರೆ ನಂಗೆ ತಿಳಿಸಿ”ಅಂತ ಟ್ವೀಟ್ ಮಾಡಿದ್ದಾರೆ.

ಇನ್ನು ನಮ್ಮ ಸಾಮಾಜಿಕ ಜಾಲತಾಣಗಳ ಅಕೌಂಟ್​​ಗಳಲ್ಲಿ ಏನಾಗ್ತಿದೆ ಅಂತ ಪ್ರಶ್ನಿಸಿರೋ ತಂಡದ ಪ್ರಮುಖ ಆಟಗಾರ ಎಬಿ ಡಿವಿಲಿಯರ್ಸ್, ಇದೊಂದು ಕೇವಲ ತಂತ್ರಗಾರಿಕೆ ವಿರಾಮ ಅಂತ ಭಾವಿಸ್ತೀನೆಂದು ಟ್ವೀಟ್ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

“ಇದ್ಯಾವ ಗೂಗ್ಲಿ? ಪ್ರೊಫೈಲ್​​ ಪಿಕ್ಸ್ ಮತ್ತು ಇನ್​ಸ್ಟಾಗ್ರಾಮ್​ ಪೋಸ್ಟ್​​ಗಳು ಎಲ್ಲಿಗೆ ಹೋದ್ವು?” ಅಂತ ಸ್ಟಾರ್ ಬೌಲರ್ ಯುಜುವೇಂದ್ರ ಚಹಲ್ ಟ್ವೀಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES