Thursday, January 23, 2025

ದೆಹಲಿಯಲ್ಲಿ ಮತ್ತೆ ಆಪ್​ ದರ್ಬಾರ್ – ಹ್ಯಾಟ್ರಿಕ್​ ಗೆಲುವಿನ ನಗೆ ಬೀರಿದ ಕೇಜ್ರಿವಾಲ್..!

ನವದೆಹಲಿ : ಇಡೀ ರಾಷ್ಟ್ರದ ಗಮನಸೆಳೆದಿದ್ದ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಸಮೀಕ್ಷೆಗಳ ಲೆಕ್ಕಾಚಾರದಂತೆ ಆಮ್​ ಆದ್ಮಿ ಪಕ್ಷ ಮತ್ತೊಂದು ಪ್ರಚಂಡ ಗೆಲುವನ್ನು ಪಡೆದಿದೆ. ಹ್ಯಾಟ್ರಿಕ್ ಗೆಲುವಿನೊಂದಿಗೆ ಅರವಿಂದ ಕೇಜ್ರಿವಾಲ್ ರಾಜಧಾನಿಯಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು ಸನ್ನದ್ಧರಾಗಿದ್ದಾರೆ.
ಒಟ್ಟು 70 ಸಂಖ್ಯಾಬಲವಿರುವ ದೆಹಲಿ ವಿಧಾನಸಭೆಯಲ್ಲಿ ಆಮ್​ ಆದ್ಮಿ ಬರೋಬ್ಬರಿ 62 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 8 ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ ಕಾಂಗ್ರೆಸ್​ ಒಂದೇ ಒಂದು ಸ್ಥಾನವನ್ನು ಪಡೆದಿಲ್ಲ. ಕೇಜ್ರಿವಾಲ್ ನೇತೃತ್ವದ ಸರ್ಕಾರ ದೆಹಲಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಮತದಾರರು ಕೈಹಿಡಿದು ಮತ್ತೊಮ್ಮೆ ಆಶೀರ್ವಾದ ಮಾಡಿದ್ದಾರೆ.

RELATED ARTICLES

Related Articles

TRENDING ARTICLES