Monday, December 23, 2024

ಭಾರತಕ್ಕೆ ಸರಣಿ ಸೋಲಿನ ಆಘಾತ

ಆಕ್ಲಂಡ್: ರವೀಂದ್ರ ಜಡೇಜಾ ಮ್ತತು ನವದೀಪ್ ಸೈನಿ ಬ್ಯಾಟಿಂಗ್ ಸಾಹಸದ ಹೊರತಾಗಿಯೂ ಕಿವೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಸರಣಿಯ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ ಸರಣಿಯನ್ನು ಕಳೆದುಕೊಂಡಿದೆ. ನ್ಯೂಜಿಲ್ಯಾಂಡ್ ನೀಡಿದ 274 ರನ್ ಗುರಿ ಬೆನ್ನಟ್ಟಿದ ಭಾರತದ ಪ್ರಮುಖ ಆಟಗಾರರು ವೈಫಲ್ಯ ಅನುಭವಿಸಿದ ಕಾರಣ 251 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿದೆ. ಭಾರತದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ಅರ್ಧ ಶತಕ ಹಾಗೂ ಸೈನಿ 45 ರನ್ ಗಳ ಹೋರಾಟದ ಹೊರತಾಗಿಯೂ ಭಾರತ ಸೋಲನುಭವಿಸಿದೆ..

ಟಾಸ್​ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಗೆ ಮಾರ್ಟಿನ್ ಗಪ್ಟಿಲ್ (79 ರನ್), ಹೆನ್ರಿ ನಿಕೋಲ್ಸ್ (41), ರಾಸ್ ಟೇಲರ್ (ಅಜೇಯ 73) ನೆರವಾದರು. ಅದರಲ್ಲೂ ಎಂಟನೇ ವಿಕೆಟ್ ಗೆ ಟೇಲರ್ ಮತ್ತು ಜಾಮಿಸನ್ 76 ರನ್ ಜೊತೆಯಾಟ ಆಡಿದರು.
ಎಂಟನೇ ವಿಕೆಟ್ ಗೆ ಜಡೇಜಾ ಮತ್ತು ನವದೀಪ್ ಸೈನಿ ಜೊತೆಯಾಟ ಭಾರತಕ್ಕೆ ಗೆಲುವಿನ ಭರವಸೆ ಮೂಡಿಸಿತ್ತು. ಉತ್ತಮ ಹೊಡೆತಗಳಿಂದ ಮಿಂಚಿದ ಸೈನಿ 45 ರನ್ ಬಾರಿಸಿದರು. ಜಡೇಜಾ 55 ರನ್ ಗಳಿಸಿದರು. ಅಂತಿಮವಾಗಿ ಭಾರತ 251 ರನ್​ಗಳಿಗೆ ಆಲೌಟಾಗುವ ಮೂಲಕ 22 ರನ್ ಗಳ ಅಂತರದ ಸೋಲನುಭವಿಸಿತು.

RELATED ARTICLES

Related Articles

TRENDING ARTICLES