Monday, November 18, 2024

4 ರಾಷ್ಟ್ರಗಳ ಕ್ರಿಕೆಟ್ ಸರಣಿಗೆ ಮುನ್ನುಡಿ ಬರೆಯಲು ಇಂಗ್ಲೆಂಡ್​ಗೆ ದಾದಾ..!

ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಲ್ಲಿಂದಲೂ ನಾನಾ ರೀತಿಯ ಮಹತ್ತರ ಬದಲಾವಣೆಗಳಿಗೆ ಮುನ್ನುಡಿ ಬರೆಯುತ್ತಿರೋ ಬಂಗಾಳದ ಹುಲಿ ಸೌರವ್ ಗಂಗೂಲಿ ಇದೀಗ ಮತ್ತೊಂದು ಮಹತ್ವದ ಟೂರ್ನಿ ಆರಂಭಿಸಲು ಹೊರಟಿದ್ದಾರೆ. ಬಿಗ್​ಬಾಸ್ ಆದ ಆರಂಭದಲ್ಲಿಯೇ ಮೊದಲ ಪಿಂಕ್​ ಬಾಲ್​ ಟೆಸ್ಟ್​​​​​​ ಆಯೋಜಿಸಿದ್ದ, ನೋ ಬಾಲ್​ ವೀಕ್ಷಣೆಗೆ ಪ್ರತ್ಯೇಕ ಅಂಪೇರ್ ಸೇರಿದಂತೆ ನಾನಾ ರೀತಿಯ ಪ್ರಯೋಗಗಳನ್ನು ಮಾಡಿರುವ ಹೊಸತನದ ಹರಿಕಾರ ಗಂಗೂಲಿ ನಾಲ್ಕು ದೇಶಗಳ ಸರಣಿ ( 4 ನೇಷನ್ ಟೂರ್ನಮೆಂಟ್) ಆಯೋಜಿಸಲು ತೀರ್ಮಾನಿಸಿದ್ದಾರೆ.
ಭಾರತ, ಇಂಗ್ಲೆಂಡ್​, ಆಸ್ಟ್ರೇಲಿಯಾ ಹಾಗೂ ಮತ್ತೊಂದು ಪ್ರಬಲ ತಂಡಗಳ ಸರಣಿಯನ್ನು ನಡೆಸಲು ದಾದಾ ಉದ್ದೇಶಿಸಿದ್ದು ಅದಕ್ಕೆ ಕಾಲ ಕೂಡ ಸನ್ನಿಹಿತವಾಗಿದೆ. ನಿನ್ನೆಯಷ್ಟೇ ಕೋಲ್ಕತ್ತಾದಿಂದ ಇಂಗ್ಲೆಂಡ್​ಗೆ ಪ್ರಯಾಳ ಬೆಳೆಸಿರೋ ಅವರು, “ಇಂಗ್ಲೆಂಡ್​ ಅಂಡ್​ ವೇಲ್ಸ್ ಕ್ರಿಕೆಟ್​ ಬೋರ್ಡ್​ ‘ ಜೊತೆ ಮಾತುಕತೆ ನಡೆಸಲಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ)ಅಧಿಕಾರಿಗಳು ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಗಂಗೂಲಿ ನಾಲ್ಕು ದೇಶಗಳ ಸರಣಿ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆಂದು ತಿಳಿದುಬಂದಿದೆ.
”ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಇಂಥಾ ಇನ್ಹೋವೇಟಿವ್ ಪ್ಲ್ಯಾನ್​​ಗಳು ಮೂಡಿ ಬರ್ತಿವೆ. ಈಗ ಸೂಪರ್ ಸೀರಿಸ್​​ ಆಯೋಜನೆ ಬಗ್ಗೆ ಚಿಂತನೆ ನಡೆಸಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ” ಅಂತ ಕ್ರಿಕೆಟ್ ಆಸ್ಟ್ರೇಲಿಯಾ ಚೀಫ್​​​​​​​​​ ಎಕ್ಸ್​ಕ್ಯೂಟಿವ್​ ಕೆವಿನ್ ರಾಬರ್ಟ್​ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.

RELATED ARTICLES

Related Articles

TRENDING ARTICLES