Sunday, December 22, 2024

ಆರ್​. ಅಶೋಕ್​​ಗೆ ಮುಖ್ಯಮಂತ್ರಿಯಾಗೋ ಯೋಗವಿದೆ : ಸ್ವಾಮೀಜಿ ಭವಿಷ್ಯ

ಬೆಂಗಳೂರು: ಸಚಿವ ಆರ್.ಅಶೋಕ್ ಅವರಿಗೆ ಸಿಎಂ ಆಗುವ ಯೋಗ ಇದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. 

ನಿಡುಮಾಮಿಡಿ ಮಠದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಆರ್.ಅಶೋಕ್ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು ಎಲ್ಲಾ ಕಾರ್ಯಗಳನ್ನು ತುಂಬಾ ಬದ್ಧತೆಯಿಂದ, ಕಾಳಜಿಯಿಂದ ಮಾಡುತ್ತಾರೆ. ಹಾಗಾಗಿ  ಮುಂದೊಂದು ದಿನ ಮುಖ್ಯಮಂತ್ರಿಯಾಗುತ್ತಾರೆ” ಎಂದು ಹೇಳಿದ್ದು, ಸ್ವಾಮೀಜಿ ಹೇಳಿಕೆಯಿಂದ ಅಶೋಕ್ ಫುಲ್ ಖುಷಿಯಾಗಿದ್ದಾರೆ. 

 ಪಕ್ಷನಿಷ್ಠೆ, ಜನನಿಷ್ಠೆಯಿಂದ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡುವ ಭಾಗ್ಯ ಬಂದಿದೆಯೋ ಹಾಗೆಯೇ ಅಶೋಕ್ ಅವರಿಗೂ ಭಾಗ್ಯ ಬರುತ್ತದೆ  ಎಂದ ಶ್ರೀಗಳು,  ಜೊತೆಗೆ ಸೋಮಣ್ಣನವರಿಗೂ ದೇವರು ಕೃಪೆ ತೋರಿಸಲಿ ಎಂದು ಹಾರೈಸಿದರು. 

RELATED ARTICLES

Related Articles

TRENDING ARTICLES