Tuesday, November 5, 2024

ಆಸೀಸ್​ ನೆಲದಲ್ಲಿ ಬ್ಯಾಟ್​ ಬೀಸಲಿದ್ದಾರೆ ಯವಿ..! ಮತ್ತೆ ಸಿಕ್ಸರ್ ಕಿಂಗ್ ಬ್ಯಾಟಿಂಗ್ ವೈಭವ ಕಣ್ತುಂಬಿಕೊಳ್ಳೋ ಅವಕಾಶ..!

ಜೊಲಿಮಂಟ್​ : ಟೀಮ್​ ಇಂಡಿಯಾ ಮಾಜಿ ಆಲ್​ರೌಂಡರ್, 2007ರ ಟಿ20 ಮತ್ತು 2011ರ ಏಕದಿನ ವರ್ಲ್ಡ್​​ಕಪ್​ ಹೀರೋ ಯುವರಾಜ್​ ಸಿಂಗ್​ ಬ್ಯಾಟಿಂಗ್ ವೈಭವವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳೋ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಸಿಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಬಳಿಕ ಕೆನಡಾ ಟಿ20 ಲೀಗ್​ ಆಡಿದ್ದ ಯುವಿ ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯೋ ಬುಷ್​ ಫೈರ್ ಬ್ಯಾಷ್ ಆಡಲಿದ್ದಾರೆ.
ಫೆಬ್ರವರಿ 8ರಂದು ಪಂದ್ಯ ನಡೆಯುತ್ತಿದ್ದು, ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ್ದ ಕಾಡ್ಗಿಚ್ಚಿನಿಂದ ಉಂಟಾದ ಹಾನಿಗಳಿಗೆ ಪರಿಹಾರಕ್ಕಾಗಿ ಈ ಪಂದ್ಯದ ಹಣವನ್ನು ನೀಡಲಾಗುತ್ತಿದೆ. ವಿಶೇಷ ಅಂದ್ರೆ ಫೆಬ್ರವರಿ 8 ರಂದು ಈ ಮ್ಯಾಚ್ ಮಾತ್ರವಲ್ಲದೆ ಐಸಿಸಿ ಟಿ20 ಮಹಿಳಾ ವರ್ಲ್ಡ್​​​​ಕಪ್​​ನ ಭಾರತ ಮತ್ತು ಆಸೀಸ್ ನಡುವಿನ ಮ್ಯಾಚ್ ಮತ್ತು ಬಿಗ್​ ಬ್ಯಾಷ್​​ ಲೀಗ್​​ ಫೈನಲ್​ ಪಂದ್ಯ ಕೂಡ  ನಡೆಯಲಿದೆ.
ಯುವರಾಜ್ ಸಿಂಗ್ ಮಾತ್ರಲ್ಲದೆ ಪಾಕಿಸ್ತಾನದ ಮಾಜಿ ವೇಗಿ ವಾಸೀಮ್ ಅಕ್ರಮ್, ಆಸೀಸ್​ ಮಾಜಿ ಕ್ರಿಕೆಟಿಗರಾದ ಆ್ಯಡಂ ಗಿಲ್​​ಕ್ರಿಸ್ಟ್​, ಮೈಕೆಲ್ ಹಸ್ಸಿ, ಬ್ರೆಟ್​ ಲೀ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಆಸೀಸ್ ಮಾಜಿ ಕ್ಯಾಪ್ಟನ್ ರಿಕಿಪಾಂಟಿಂಗ್ ಮತ್ತು ಮಾಜಿ ಸ್ಪಿನ್ನರ್ ಶೇನ್ ವಾರ್ನ್​ ಎರಡು ತಂಡಗಳನ್ನು ಮುನ್ನಡೆಸಲಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ ಪಾಟಿಂಗ್ XI ಹಾಗೂ ವೆಸ್ಟ್​ ಇಂಡೀಸ್ ವೇಗಿ ಕರ್ಟ್ನಿ ವಾಲ್ಷ್​ ವಾರ್ನ್​ XI ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

RELATED ARTICLES

Related Articles

TRENDING ARTICLES