Monday, December 23, 2024

ನಾನು ತಪ್ಪು ಮಾಡಿಲ್ಲ, ಮಾಡಿದ್ದರೆ ಓಪನ್ನಾಗಿ ಹೇಳ್ತೀನಿ ಅಂತ ಗುಡುಗಿದ ಕುಮಾರಸ್ವಾಮಿ!

ರಾಮನಗರ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ‘ಮಿಣಿ ಮಿಣಿ’ ಹೇಳಿಕೆ ವೈರಲ್ ಆಗ್ತಿದ್ದಂತೆ ಕೆಂಡಾಮಂಡಲರಾಗಿದ್ದು, ”ನಾನು ನನ್ನ ಜೀವನದಲ್ಲಿ  ತಪ್ಪುಗಳನ್ನು ಮಾಡುವುದಿಲ್ಲ. ತಪ್ಪು ಮಾಡಿದ್ದರೆ ಅದನ್ನು ಓಪನ್​ ಆಗಿ ಹೇಳುತ್ತೇನೆ”  ಎಂದು ಗುಡುಗಿದ್ದಾರೆ. 

ರಾಮನಗರದಲ್ಲಿ ಮಾತನಾಡಿದ ಅವರು, “ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೀಳಾಗಿ ವೈರಲ್ ಮಾಡಲಾಗುತ್ತಿದೆ. ಈ ಕೆಲಸವನ್ನು ಮಾಡುತ್ತಿರುವುದು ಬಿಜೆಪಿ ಫ್ಯಾನ್ಸ್. ನನ್ನ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ, ಕೀಳಾಗಿ ವೈರಲ್ ಮಾಡೋದೆಲ್ಲಾ ಬಿಜೆಪಿ ಪಕ್ಷದ ಸಂಸ್ಕೃತಿ ಎಂದು ತೋರಿಸಿಕೊಂಡಿದ್ದಾರೆ. ನನ್ನ ಜೀವನ, ನಡವಳಿಕೆ ಗೊತ್ತಿರುವವರಿಗೆ ನಾನು ಏನು ಅಂತ ಗೊತ್ತಿದೆ. ಅದನ್ನು ಜನ ನೋಡಿದ್ದಾರೆ. ಹಾಗಾಗಿ ನನಗೆ ಇವರ ಸರ್ಟಿಫಿಕೇಟ್ ಬೇಕಾಗಿಲ್ಲ” ಅಂತ ವಾಗ್ದಾಳಿ ನಡೆಸಿದ್ರು. 

ನಾನು ಯಾರ ಬಗ್ಗೆಯೂ ವೈಯಕ್ತಿಕ ಹೇಳಿಕೆ  ಕೊಟ್ಟಿಲ್ಲ. ಇವರುಗಳು ತಮ್ಮ ಸರ್ಕಾರದ ಲೋಪದೋಷಗಳನ್ನು ಮುಚ್ಚಿ ಹಾಕಲು ಇಂತಹ ಪ್ರಚಾರಗಳನ್ನು ಮಾಡುತ್ತಾರೆ. ಅಧಿಕಾರ ನಡೆಸುವ ಸರ್ಕಾರಗಳು ಈ ವಿಚಾರಗಳಿಗೆ ಪ್ರಚಾರ ಕೊಡದೆ ಅವರ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು.ಈ ಹೇಳಿಕೆ ನಿಡಿರುವುದು ನಿಜ ಆದರೆ ಅದನ್ನು  ನಾನು ಕಥೆ ಕಟ್ಟಿ ಹೇಳಿರುವುದಲ್ಲ ಮಾಧ್ಯಮಗಳ ವರದಿ ಮೇಲೆ ಹೇಳಿದ್ದೇನೆ. ಈ ಬಗ್ಗೆ ನಾನೂ ವಿಧಾನಸಭೆಯಲ್ಲಿಯೂ ಚರ್ಚೆ ಮಾಡುತ್ತೇನೆ ಎಂದರು. 

 

RELATED ARTICLES

Related Articles

TRENDING ARTICLES