Tuesday, December 24, 2024

ಸೆಲೆಕ್ಟಾದ್ರೂ ಅತೀ ಹಿರಿಯ ಆಟಗಾರನಿಗೆ ಐಪಿಎಲ್​​ನಲ್ಲಿ ಆಡೋ ಚಾನ್ಸ್ ಇಲ್ಲ!

ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಬಿಕರಿಯಾದ ಅತೀ ಹಿರಿಯ ಆಟಗಾರ ಪ್ರವೀಣ್​​ ತಾಂಬೆ ಅವಕಾಶ ವಂಚಿತರಾಗಿದ್ದಾರೆ. ಟೂರ್ನಿಗೆ ಆಯ್ಕೆಯಾಗಿದ್ರೂ ಈ ಬಾರಿ ಆಡುವಂತಿಲ್ಲ! ಬಿಸಿಸಿಐ ನಿಯಮ ಉಲ್ಲಂಘಿಸಿದ್ದರಿಂದ ತಾಂಬೆ ಅವರನ್ನು ಐಪಿಎಲ್​ನಿಂದ ಅನರ್ಹಗೊಳಿಸಲಾಗಿದೆ.
ದುಬೈನ ಶಾರ್ಜಾದಲ್ಲಿ ನಡೆದಿದ್ದ ಟಿ20 ಲೀಗ್​ ಟೂರ್ನಿಯಲ್ಲಿ ತಾಂಬೆ ಪಾಲ್ಗೊಂಡಿದ್ದರು. ಬಿಸಿಸಿಯ ನಿಯಮಗಳ ಪ್ರಕಾರ ಭಾರತದ ಯಾವೊಬ್ಬ ಸಕ್ರಿಯ ಆಟಗಾರ ನಿವೃತ್ತಿಗೆ ಮುನ್ನ ಯಾವ್ದೇ ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸಬಾರ್ದು. ಈ ನಿಯಮವನ್ನು ಉಲ್ಲಂಘಿಸಿದ್ದರಿಂದ ಐಪಿಎಲ್​ನಿಂದ ದೂರ ಉಳಿಯಬೇಕಿದೆ.
48 ವರ್ಷದ ತಾಂಬೆಯನ್ನು ಕೋಲ್ಕತ್ತಾ ನೈಟ್​ ರೈಡರ್ಸ್ ಮೂಲಬೆಲೆ 20 ಲಕ್ಷ ರೂಗೆ ಖರೀದಿಸಿತ್ತು, ಅನುಭವಿ ಸ್ಪಿನ್ನರ್ ತಾಂಬೆ ಬಿಸಿಸಿಐ ನಿಯಮ ಉಲ್ಲಂಘಿಸಿದೆ ಇದ್ದಿದ್ರೆ 2020 ಐಪಿಎಲ್​ ಆಡುವ ಅತೀ ಹಿರಿಯ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗುತ್ತಿದ್ದರು.

ತಾಂಬೆ ಈ ಹಿಂದೆ ರಾಜಸ್ಥಾನ್ ರಾಯಲ್ಸ್, ಗುಜರಾತ್ ಲಯನ್ಸ್ , ಸನ್​ ರೈಸರ್ಸ್​ ಹೈದರಾಬಾದ್ ಪರ ಆಡಿದ್ದರು.  ಅಧಿಕೃತವಾಗಿ ನಿವೃತ್ತಿ ಘೋಷಿಸದೆ ವಿದೇಶಿ ಟೂರ್ನಿ ಟಿ10ನಲ್ಲಿ ಪಾಲ್ಗೊಂಡಿದ್ರಿಂದ ತಾಂಬೆ ಅನರ್ಹತೆ ಶಿಕ್ಷೆಗೆ ಗುರಿಯಾಗಿರೋದ್ರಿಂದ ಕೆಕೆಆರ್ ಬೇರೆ ಆಟಗಾರನನ್ನು ಆಯ್ಕೆ ಮಾಡಿಕೊಳ್ಬೇಕಾಗಿದೆ.

RELATED ARTICLES

Related Articles

TRENDING ARTICLES