Monday, December 23, 2024

ಮಾನಸ ಗಂಗೋತ್ರಿ ವಿದ್ಯಾರ್ಥಿಗಳ ಹೋರಾಟದಲ್ಲಿ ‘ಫ್ರೀ ಕಾಶ್ಮೀರ ‘ ಫಲಕ!

ಮೈಸೂರು: ಜೆಎನ್ ಯು ಯುನಿವರ್ಸಿಟಿಯಲ್ಲಿ ನಡೆದ ಹಲ್ಲೆ ಖಂಡಿಸಿ ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.


ಜೆಎನ್​ಯು ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಗಳು ಮುಖಕ್ಕೆ ಮಾಸ್ಕ್​ ಹಾಕಿಕೊಂಡು ದಾಂಧಲೆ ನಡೆಸಿ ಹಲ್ಲೆ ಮಾಡಿದ್ದರು. ಇದನ್ನು ಖಂಡಿಸಿ ವಿದ್ಯಾರ್ಥಿಗಳು ನಿನ್ನೆ ಸಂಜೆ ವಿಶ್ವವಿದ್ಯಾಲಯದ ಆವರಣದಲ್ಲಿ ಪಂಜಿನ ಮೆರವಣಿಗೆ ನಡೆಸಿದರು. ಈ ವೇಳೆ ಕೆಲವು ವಿದ್ಯಾರ್ಥಿಗಳು ಫ್ರೀ ಕಾಶ್ಮೀರ ಬೋರ್ಡ್​ ಪ್ರದರ್ಶಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಜೆಎನ್ ಯು ಹಲ್ಲೆಗೂ ಫ್ರೀ ಕಾಶ್ಮೀರ ಸಂಗತಿಗೂ ಏನು ಸಂಬಂಧ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ಹೋರಾಟದ ಮೂಲ ಉದ್ದೇಶ ಪ್ರತ್ಯೇಕ ಕಾಶ್ಮೀರನಾ ಜೆಎನ್​ಯು ಗಲಾಟೆಯನ್ನು ಖಂಡಿಸುವುದಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

RELATED ARTICLES

Related Articles

TRENDING ARTICLES