Thursday, December 19, 2024

ಚುನಾವಣಾ ಪೂರ್ವ ಸಮೀಕ್ಷೆ : ಮತ್ತೆ ಆಪ್​​ಗೆ ರಾಜಧಾನಿ ಗದ್ದುಗೆ ..!

ನವದೆಹಲಿ : ಫೆಬ್ರವರಿ 8ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ನಿನ್ನೆಯಷ್ಟೇ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಪ್ರಕಟಿಸಿದ್ದು, ಅದರ ಬೆನ್ನಲ್ಲೇ ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೊರಬಂದಿದ್ದು, ಮತ್ತೆ ಆಮ್​ ಆದ್ಮಿ ಅಧಿಕಾರ ಗದ್ದುಗೆ ಏರಲಿದೆ ಎಂದು ತಿಳಿಸಿದೆ. ಇದರೊಂದಿಗೆ ಬಿಜೆಪಿ ಮತ್ತು ಕಾಂಗ್ರೆಸ್​ಗೆ ಶಾಕ್​ ಆಗಿದೆ. 
ಎಬಿಪಿ – ಸಿ ವೋಟರ್​ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 8, ಕಾಂಗ್ರೆಸ್​ 3, ಆಮ್​ಆದ್ಮಿ 59 ಸ್ಥಾನಗಳನ್ನು ಗೆಲ್ಲಲಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್​ ಆದ್ಮಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಳೆದ ಬಾರಿ 3 ಸ್ಥಾನ ಗಳಿಸಿದ್ದ ಬಿಜೆಪಿ ಬಾರಿ 8 ಕ್ಷೇತ್ರಗಳಲ್ಲಿ ಗೆಲ್ಲಲಿದ್ದು, ಕಳೆದ ಬಾರಿ ಶೂನ್ಯ ಸಂಪಾದನೆ ಮಾಡಿದ್ದ ಕಾಂಗ್ರೆಸ್​ ಬಾರಿ 3 ಸ್ಥಾನ ಪಡೆಯಲಿದೆ. ಆಪ್​​ 8 ಸ್ಥಾನ ಕಳೆದುಕೊಂಡರೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗುತ್ತದೆ ಎಂದು ವರದಿಯಾಗಿದೆ.

* ಒಟ್ಟು ಸ್ಥಾನ / ಸಂಖ್ಯಾಬಲ – 70
* ಬಹುಮತಕ್ಕೆ ಬೇಕಾದ ಸಂಖ್ಯೆ – 36
* ಆದ್ಮಿ ಪಾರ್ಟಿ – 59
* ಬಿಜೆಪಿ – 08
* ಕಾಂಗ್ರೆಸ್​ – 03

 

 

 

RELATED ARTICLES

Related Articles

TRENDING ARTICLES